ನೆಲ್ಯಾಡಿ-ದೋಂತಿಲ ಶ್ರೀಸುಬ್ರಮಣ್ಯೇಶ್ವರ ದೇವಸ್ಥಾನದಲ್ಲಿ ಚಂಪಾಷಷ್ಠಿ

ನೆಲ್ಯಾಡಿ-ದೋಂತಿಲ ಶ್ರೀಸುಬ್ರಮಣ್ಯೇಶ್ವರ ದೇವಸ್ಥಾನದಲ್ಲಿ ಚಂಪಾಷಷ್ಠಿ

ನೇಸರ ಡಿ10: ಚಂಪಾಷಷ್ಠಿ ಅಂಗವಾಗಿ ನೆಲ್ಯಾಡಿಯ ಶ್ರೀಸುಬ್ರಹ್ಮಣ್ಯೇಶ್ವರ ದೇವರ ಸನ್ನಿಧಿಯಲ್ಲಿ ಚಂಪಾಷಷ್ಠಿ ಉತ್ಸವವನ್ನು ದಿನಾಂಕ 9-12-21 ರಂದು ಆಚರಿಸಲಾಯಿತು.
ಬೆಳಗ್ಗೆ ಶ್ರೀದೇವರಿಗೆ ನಿತ್ಯಪೂಜೆ, ಕ್ಷೇತ್ರದ ಚಾಮುಂಡೇಶ್ವರಿ ದೇವಿಗೆ ಪರ್ವ ಮತ್ತು ನಾಗದೇವರಿಗೆ ತಂಬಿಲಾದಿ ನಡೆದು ನಂತರ ಮಧ್ಯಾಹ್ನ ಪಂಚಾಮೃತ ಅಭಿಷೇಕ ಮತ್ತು ಮಹಾಪೂಜೆ ನಡೆಯಿತು. ಶ್ರೀಕ್ಷೇತ್ರದಲ್ಲಿ ಷಷ್ಠಿ ವೃತಧಾರಿಗಳಿಗೆ ವಿಶೇಷ ಭೋಜನ ವ್ಯವಸ್ಥೆಯನ್ನು ಮಾಡಲಾಯಿತು, ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.ದೇವಸ್ಥಾನದ ಪ್ರಧಾನ ಅರ್ಚಕ ಪದ್ಮನಾಭ ನೂಜಿನ್ನಾಯ ಮತ್ತು ಶ್ರೀಧರ ನೂಜಿನ್ನಾಯ ಪೂಜಾಕಾರ್ಯವನ್ನು ನಡೆಸಿಕೊಟ್ಟರು.

ಜಾಹೀರಾತು

Leave a Reply

You May Have Missed

error: Content is protected !!