ಗೋಳಿತ್ತೊಟ್ಟು: ನಗರ ಸಂಕೀರ್ತನಾ ಯಾತ್ರೆ ಹಾಗು ಭಜನಾ ಸಮಾವೇಶದ ಆಮಂತ್ರಣ ಬಿಡುಗಡೆ

ಗೋಳಿತ್ತೊಟ್ಟು: ನಗರ ಸಂಕೀರ್ತನಾ ಯಾತ್ರೆ ಹಾಗು ಭಜನಾ ಸಮಾವೇಶದ ಆಮಂತ್ರಣ ಬಿಡುಗಡೆ

ಗೋಳಿತ್ತೊಟ್ಟು: ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ (ರಿ,) ವಿನಾಯಕಬೆಟ್ಟ ಗೋಳಿತ್ತೊಟ್ಟು ಇದರ ಆಶ್ರಯದಲ್ಲಿ ನವೆಂಬರ್ 07 ರಿಂದ 12ರ ವರೆಗೆ ನಡೆಯುವ ಮನೆ – ಮನ ಭಜನೆ ಹಾಗು ನವೆಂಬರ್ 13ರಂದು ವಜ್ರದೇಹಿ ಮಠಾಧೀಶರಾದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮಿಗಳ ಉಪಸ್ಥಿತಿಯಲ್ಲಿ ನಡೆಯುವ ನಗರ ಸಂಕೀರ್ತನಾ ಯಾತ್ರೆ ಹಾಗು ಭಜನಾ ಸಮಾವೇಶದ ಆಮಂತ್ರಣ ಬಿಡುಗಡೆಯು ಅ.27 ರಂದು ಗುರುವಾರ ಸಂಜೆ 6:30ಕ್ಕೆ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ಅಲೆಕ್ಕಿ, ಕಾರ್ಯದರ್ಶಿ ಸುಭಾಷ್ ಶೆಟ್ಟಿ ಪುರ, ಉಪಾಧ್ಯಕ್ಷರಾದ ನಾಗೇಶ್ ಸಮರಗುಂಡಿ, ಜತೆ ಕಾರ್ಯದರ್ಶಿ ಅಶೋಕ್ ಶೆಟ್ಟಿ ಪಾತೃಮಾಡಿ, ಕೋಶಾಧಿಕಾರಿ ರಘುನಾಥ್ ಪಾಲೇರಿ, ಕಲಾ ಮಂದಿರ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ವೆಂಕಪ್ಪ ಗೌಡ ಡೆಬ್ಬೇಲಿ, ಕಾರ್ಯದರ್ಶಿ ಶಿವರಾಮ ಅಲೆಕ್ಕಿ, ಶಿಶು ಮಂದಿರ ಕಾರ್ಯದರ್ಶಿ ಕೀರ್ತನ್ ಸಣ್ಣಂಪಾಡಿ, ಉಪಾಧ್ಯಕ್ಷ ಹರೀಶ್ ಪಾತೃಮಾಡಿ, ಭಜನಾ ಮಂಡಳಿಯ ಕಾರ್ಯದರ್ಶಿ ಜಯಂತ ಅಂಬರ್ಜೆ ಮುಂತಾದವರು ಭಾಗವಹಿಸಿದ್ದರು.

Previous post

ದಲಿತ ಮಹಿಳೆಯ ಮಾನಭಂಗ ಯತ್ನ : ವಿರೋಧ ಪಕ್ಷಗಳು ಆರೋಪಿಗಳ ಪರ ನಿಲ್ಲುವುದನ್ನು ನಿಲ್ಲಿಸಬೇಕು, ಬಿಜೆಪಿ ಅಗ್ರಹ

Next post

ಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ದಲ್ಲಿ ಸನಾತನ ವಾಙ್ಮಯ ಉದ್ಘಾಟನಾ ಕಾರ್ಯಕ್ರಮ

Leave a Reply

You May Have Missed

error: Content is protected !!