ಶಿರಾಡಿ ಘಾಟಿ ಸಮೀಪ ಮಹಿಂದ್ರ ಜೀತೋ ಗಾಡಿ ಪಲ್ಟಿ

ಶಿರಾಡಿ ಘಾಟಿ ಸಮೀಪ ಮಹಿಂದ್ರ ಜೀತೋ ಗಾಡಿ ಪಲ್ಟಿ

ನೇಸರ ಡಿ11: ಬೆಳ್ತಂಗಡಿ ತಾಲೂಕಿನ ಕಳಂಜ ಎಂಬಲ್ಲಿಯ ನಾಲ್ಕು ಜನರು ಶಿರಾಡಿ ಗಡಿ ದೇವಸ್ಥಾನಕ್ಕೆ ತೆರಳಿ ಹರಕೆ ತೀರಿಸಿ ಹಿಂತಿರುಗಿ ಬರುವಾಗ ಅವರು ಪ್ರಯಾಣಿಸುತ್ತಿದ್ದ ಮಹಿಂದ್ರ ಜೀತೋ ಗಾಡಿ ಪಲ್ಟಿ ಹೊಡೆದ ಪರಿಣಾಮವಾಗಿ ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ರಸ್ತೆಗೆಸೆಯಲ್ಪಟ್ಟು ಗಾಯಗೊಂಡಿರುವ ಘಟನೆ ಇಂದು ಸಂಜೆ ನಡೆದಿದೆ.

ಒಬ್ಬರಿಗೆ ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗಿದ್ದು.ಗುರುಪ್ರಸಾದ್ ಎಂಬವರ ತಲೆಗೆ ಪೆಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ.

Leave a Reply

You May Have Missed

error: Content is protected !!