ಬಂದಾರು ಮೃತರ ಕುಟುಂಬಕ್ಕೆ ಸಹಾಯಹಸ್ತ

ಬಂದಾರು ಮೃತರ ಕುಟುಂಬಕ್ಕೆ ಸಹಾಯಹಸ್ತ

ಬಂದಾರು: ನ.2 ಬಂದಾರು ಗ್ರಾಮದ ಬೈಪಾಡಿ ನೇರೋಳ್ದಪಲಿಕೆ (ಪೆರ್ಲ) ಕಾಲೋನಿಯಲ್ಲಿ ಇತ್ತೀಚೆಗೆ ಆಕಸ್ಮಿಕವಾಗಿ ಮೃತರಾದ ಬಾಬು ಅವರ ತಾಯಿ ಚಂರ್ಬೆ ಅವರ ಕುಟುಂಬಕ್ಕೆ ಮಾನ್ಯ ಶಾಸಕ ಹರೀಶ್ ಪೂಂಜರವರು ನೀಡಿದ ಧನ ಸಹಾಯ ಹಾಗೂ ಗ್ರಾಮಪಂಚಾಯತ್ ವತಿಯಿಂದ ತುರ್ತು ಸಹಾಯದ ನಿಧಿಯ ರೂ 3,000/- ದ ಚೆಕ್ ಬಂದಾರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪರಮೇಶ್ವರಿ ಕೆ ಗೌಡ ಹಾಗೂ ಬೂತ್ ಪ್ರಮುಖರಾದ ಹೊನ್ನಪ್ಪ ಗೌಡ ಅವರು ಮೃತರ ಮೃತರ ತಾಯಿಗೆ ಹಸ್ತಾಂತರ ಮಾಡಿ, ಸಾಂತ್ವನ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ, ಗ್ರಾ.ಪಂ.ಸದಸ್ಯರಾದ ಶ್ರೀಮತಿ ಭಾರತಿ, ಶ್ರಿಮತಿ ಅನಿತಾ ಹಾಗೂ ಬೂತ್ ಮಟ್ಟದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

Previous post

ವೃದ್ಧಾಶ್ರಮದಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ ನೆಲ್ಯಾಡಿ ವಿಶ್ವವಿದ್ಯಾನಿಲಯ ಕಾಲೇಜು

Next post

ವಿದ್ಯಾಭಾರತಿ ಕ್ರೀಡಾಕೂಟದಲ್ಲಿ ತೆಂಕಿಲ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಮಟ್ಟಕ್ಕೆ ಆಯ್ಕೆ

Leave a Reply

You May Have Missed

error: Content is protected !!