ನಿಡ್ಲೆ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಬೆಸ್ಟ್ ಪೌಂಡೇಶನ್ ಟ್ರಸ್ಟ್ ಸ್ಥಾಪಕ ರಕ್ಷಿತ್ ಶಿವರಾಮ್ ರಿಂದ ಊಟದ ತಟ್ಟೆ ಹಾಗೂ ಲೋಟ ವಿತರಣೆ

ನಿಡ್ಲೆ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಬೆಸ್ಟ್ ಪೌಂಡೇಶನ್ ಟ್ರಸ್ಟ್ ಸ್ಥಾಪಕ ರಕ್ಷಿತ್ ಶಿವರಾಮ್ ರಿಂದ ಊಟದ ತಟ್ಟೆ ಹಾಗೂ ಲೋಟ ವಿತರಣೆ

ಕೊಕ್ಕಡ: ನಿಡ್ಲೆ ಪ್ರೌಢ ಶಾಲೆಯಲ್ಲಿ ಪಂಚಾಯತ್ ಮತ್ತು ಶಾಲಾ ವತಿಯಿಂದ “ಮಗುವಿಗೊಂಡು ಪುಸ್ತಕ ನೀಡಿ” ಕಾರ್ಯಕ್ರಮ ದಿನಾಂಕ 19/11/2022 ನೇ ಶನಿವಾರ ದಂದು ನಿಡ್ಲೆ ಪ್ರೌಢ ಶಾಲೆಯಲ್ಲಿ ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಮತ್ತು ನಿಡ್ಲೆ ಪಂಚಾಯತ್ ಹಾಗೂ ಶಾಲಾ ವತಿಯಿಂದ ಮಕ್ಕಳಿಗೆ ಪುಸ್ತಕ ಮತ್ತಿತರ ಸಾಮಗ್ರಿಗಳನ್ನು ನೀಡಲಾಯಿತು.

ಬೆಳ್ತಂಗಡಿ ಬೆಸ್ಟ್ ಪೌಂಡೇಶನ್ ಟ್ರಸ್ಟ್ ಸ್ಥಾಪಕರಾದ ರಕ್ಷಿತ್ ಶಿವರಾಮ್ ಇವರು ಶಾಲಾ ಮಕ್ಕಳಿಗೆ ಊಟದ ತಟ್ಟೆ ಹಾಗೂ ಲೋಟವನ್ನು ನೀಡಿದರು ಹಾಗೂ ಮಹಾಗಣಪತಿ ಭಜನಾ ಮಂದಿರದಿಂದ ಬಾಲಕರಿಗೆ ಬೆಲ್ಟ್ ನ್ನು ನೀಡಲಾಯಿತು.
ಈ ಸಂದರ್ಭ ವೇದಿಕೆಯಲ್ಲಿ ನಿಡ್ಲೆ ಪಂಚಾಯತ್ ಉಪಾಧ್ಯಕ್ಷರಾದ ಶ್ಯಾಮಲ ಹಾಗೂ ಸದಸ್ಯರಾದ ಜಗದೀಶ ನಿಡ್ಲೆ, ಹೇಮಾವತಿ ಅಲ್ತಿಮಾರು, ಶಾಲಾಬಿವೃದ್ದಿ ಸಮಿತಿ ಅದ್ಯಕ್ಷರಾದ ಪುರುಶೋತ್ತಮ ಗೌಡ, ನಿವೃತ್ತ ಶಿಕ್ಷಕರಾದ ಪ್ರಪುಲ್ಲ ಟೀಚರ್, ಪಂಚಾಯತ್ ಅಬಿವೃದ್ದಿ ಅಧಿಕಾರಿ ರವಿ, ಭಜನಾಮಂಡಳಿಯ ಅದ್ಯಕ್ಷರಾದ ಜಯಂತ ಬಂಗೇರ, ಶಾಲಾ ಮುಖ್ಯಶಿಕ್ಷಕರಾದ ಶಾಂತ ಶೆಟ್ಟಿ, ಲೈಬ್ರೇರಿಯ ಶಕುಂತಲಾ ಶೆಟ್ಟಿ ಮತ್ತು ಭಜನಾ ಮಂಡಳಿ ಸದಸ್ಯರು ಹಾಗೂ ಊರಿನವರು ಉಪಸ್ಥಿತರಿದ್ದರು.

Previous post

ದ.ಕ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ; 13 ಮಂದಿ ಕ್ರೀಡಾಪಟುಗಳು 6 ಪ್ರಥಮ ಸ್ಥಾನಗಳೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆ

Next post

ಅರಂತೋಡು ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 9ನೇ ತರಗತಿ ವಿದ್ಯಾರ್ಥಿನಿ ದೀಪ್ತಿ ಕೆ.ಸಿ ರಾಜ್ಯ ಮಟ್ಟಕ್ಕೆ ಆಯ್ಕೆ

Leave a Reply

You May Have Missed

error: Content is protected !!