ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಹಾಸಭೆಯಲ್ಲಿ ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಶಾಂಕ್ ಗೋಖಲೆ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೋಮಸುಂದರ ಶೆಟ್ಟಿರವರಿಗೆ ಸನ್ಮಾನ

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಹಾಸಭೆಯಲ್ಲಿ ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಶಾಂಕ್ ಗೋಖಲೆ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೋಮಸುಂದರ ಶೆಟ್ಟಿರವರಿಗೆ ಸನ್ಮಾನ

ನೇಸರ ಡಿ.14: ಕಡಬ-ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅದ್ವಿತೀಯ ಸಾಧನೆಯನ್ನು ಗುರುತಿಸಿ ಡಿ.14 ರಂದು ನಡೆದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಶಶಾಂಕ್ ಗೋಖಲೆ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೋಮಸುಂದರ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
2020-21ನೇ ಸಾಲಿನಲ್ಲಿ ಸಂಘವು ರೂ.10.24 ಕೋಟಿ ಠೇವಣಿ ಹೊಂದಿದ್ದು,ರೂ.4.46 ಕೋಟಿ ಪಾಲು ಬಂಡವಾಳ ಹೊಂದಿದೆ. ರೂ.39.85 ಕೋಟಿ ಸಾಲ ಹೊರಬಾಕಿ ಇದ್ದು ವರ್ಷಾಂತ್ಯಕ್ಕೆ ಶೇ. 95.58 ಸಾಲ ಮರುಪಾವತಿಯಾಗಿರುತ್ತದೆ, ವರದಿ ಸಾಲಿನಲ್ಲಿ ದಾಖಲೆಯ ರೂ.105.03 ಲಕ್ಷ ಲಾಭ ಗಳಿಸಿ ಸಂಘದ ಸದಸ್ಯರಿಗೆ ಶೇ.12 ಲಾಭಂಶ ವಿತರಣೆ ಮಾಡಲಾಗಿದೆ,ಅಲ್ಲದೆ ಸಂಘವು ಉತ್ತಮ ಆಡಳಿತವನ್ನು ನಡೆಸಿ ಸದಸ್ಯರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿದೆ ಈ ಹಿನ್ನಲೆಯಲ್ಲಿ ಸಂಘದ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಯವರನ್ನು ಸನ್ಮಾನಿಸಲಾಗಿದೆ.

ವೇದಿಕೆಯಲ್ಲಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಎಂ ಎನ್ ರಾಜೇಂದ್ರ ಕುಮಾರ್, ನಿರ್ದೇಶಕ ಶಶಿಕುಮಾರ್, ಕಡಬ-ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಜಯಚಂದ್ರ.ರೈ, ಶಿವಪ್ರಸಾದ್ ಪುತ್ತಿಲ, ಕುಶಾ ಕುಮಾರ ಮೊದಲಾದವರು ಉಪಸ್ಥಿತರಿದ್ದರು

Previous post

ಶ್ರೀ ಕ್ಷೇತ್ರ ಸುಬ್ರಮಣ್ಯದ ಆನೆಯು ದೇವಸ್ಥಾನಕ್ಕೆ ಬಂದಿದ್ದ ವ್ಯಕ್ತಿಯೋರ್ವನನ್ನು ದೇವಸ್ಥಾನದ ಒಳಗಡೆ ಎತ್ತಿ ಎಸೆದ ಘಟನೆಯೊಂದು ನಡೆದಿದೆ.

Next post

ಡಿ.ಕೆ.ಆರ್. ಡಿ.ಎಸ್ (ರಿ) ನೇತೃತ್ವದಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕು ದಿನಾಚರಣೆ

Leave a Reply

You May Have Missed

error: Content is protected !!