ಕಾಂಗ್ರೆಸ್ ಮುಖಂಡ ಗಣೇಶ್ ಪ್ರಸಾದ್ ಕೆರ್ಮುಣ್ಣಾಯ ನಿಧನ

ಕಾಂಗ್ರೆಸ್ ಮುಖಂಡ ಗಣೇಶ್ ಪ್ರಸಾದ್ ಕೆರ್ಮುಣ್ಣಾಯ ನಿಧನ

ಬೆಳ್ತಂಗಡಿ: ಕಣಿಯೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಎಪಿಎಂಸಿ ಮಾಜಿ ಸದಸ್ಯ ಕಾಂಗ್ರೆಸ್ ಮುಖಂಡ ಗಣೇಶ್ ಪ್ರಸಾದ್ ಕೆರ್ಮುಣ್ಣಾಯ(42) ಡಿ.7ರಂದು ಬೆಳ್ತಂಗಡಿ ಆಸ್ಪತ್ರೆಯಲ್ಲಿ ನಿಧನರಾದರು.
ಕೃಷಿಕರಾಗಿದ್ದ ಇವರಿಗೆ ಕಿಡ್ನಿ ವೈಫಲ್ಯ ಉಂಟಾಗಿ ಕೆಲ ಸಮಯಗಳಿಂದ ಡಯಾಲಿಸಿಸ್ ನಡೆಸುತ್ತಿದ್ದರು. ಬುಧವಾರ ಬೆಳಗ್ಗೆ ಡಯಾಲಿಸಿಸ್ ಗಾಗಿ ಬೆಳ್ತಂಗಡಿ ಆಸ್ಪತ್ರೆಗೆ ಹೋಗುವಾಗ ರಕ್ತದೊತ್ತಡ ಕಡಿಮೆಯಾಗಿ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.
ಇವರು ಪತ್ನಿ ಪಲ್ಲವಿ, ಪುತ್ರ ಶ್ರೀನಿವಾಸ ಪ್ರಸಾದ್, ಪುತ್ರಿ ಶ್ರೀ ಲಕ್ಷ್ಮೀ ತೇಜಸ್ವಿನಿ ಹಾಗೂ ಸಹೋದರ ಸಹೋದರಿಯರು ಸೇರಿದಂತೆ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.

ಸಂತಾಪ: ಮೃತರ ಮನೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಾಜಿ ಶಾಸಕ ವಸಂತ ಬಂಗೇರ ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದರು.

Leave a Reply

You May Have Missed

error: Content is protected !!