ಉದನೆ: ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ

ಉದನೆ: ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ

ಉದನೆ: ಇಲ್ಲಿನ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ ನಡೆಯಿತು‌.

ಸೈಂಟ್ ಆಂಟನೀಸ್ ಪ್ರೌಢಶಾಲೆ ಹಾಗೂ ಬಿಷಪ್ ಪೋಳಿಕಾರ್ಪೋಸ್ ಆಂಗ್ಲಮಾಧ್ಯಮ ವಿಭಾಗ ಜಂಟಿ ಆಶ್ರಯದಲ್ಲಿ ನಡೆದ ಕ್ರೀಡಾಕೂಟವನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಭಾಸ್ಕರ ಗೌಡ ಎಸ್ ಉದ್ಘಾಟಿಸಿ ಮಾತನಾಡಿ, ಶಾಲೆಯಲ್ಲಿ ಪಳಗಿದ ಕ್ರೀಡಾಪಟುಗಳು ಮುಂದೆ ದೇಶದ ಕೀರ್ತಿಯನ್ನು ಬೆಳಗುವ ಕ್ರೀಡಾಪಟುಗಳಾಗಬೇಕೆಂದು ಶುಭವನ್ನು ಹಾರೈಸಿದರು.

ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್ ಕ್ರೀಡಾಧ್ವಜಾರೋಹಣ ನೆರವೇರಿಸಿ ಎಲ್ಲಾ ಕ್ರೀಡಾ ಪಟುಗಳಿಗೆ ಶುಭಹಾರೈಸಿದರು.

ಸೈಂಟ್ ಆಂಟನೀಸ್ ಪ್ರೌಢಶಾಲೆಯ ಮುಖ್ಯಗುರುಗಳಾದ ಶ್ರೀಧರ ಗೌಡ, ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ನ ಮುಖ್ಯಗುರುಗಳಾದ ಸಿಬಿಚ್ಚನ್ ಟಿ.ಸಿ, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಜಿಮ್ಸನ್ ವೇದಿಕೆ ಯಲ್ಲಿ ಉಪಸ್ಥಿರಿದ್ದರು. ಕ್ರೀಡಾ ನಾಯಕ ಅಭೀಷ್ ಕ್ರೀಡಾ ಪಟುಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿದರು. ಕ್ರೀಡಾ ಸಾಧಕಿ ಆಶ್ಲಿ ಕೆ ಏಲಿಯಾಸ್ ಕ್ರೀಡಾ ಜ್ಯೋತಿ ಹೊತ್ತು ಸಾಗಿದರು. ಶಿಕ್ಷಕರಾದ ಯಶೋಧರ ಕೆ.ನಿರೂಪಿಸಿ, ದೈಹಿಕ ಶಿಕ್ಷಕರಾದ ಜಿಮ್ಸನ್ ವರ್ಗಿಸ್ ಸ್ವಾಗತಿಸಿ, ರಾಜೇಶ್ ರೈ ವಂದಿಸಿದರು.
ಎರಡೂ ಸಂಸ್ಥೆಯ ಭೋದಕ ಭೋದಕೇತರ ಸಿಬ್ಬಂದಿಗಳು ತೀರ್ಪುಗಾರರಾಗಿ ಸಹಕರಿಸಿದರು.

Leave a Reply

You May Have Missed

error: Content is protected !!