ಬೆಳಾಲು ಅನಂತೋಡಿ ವಾರ್ಷಿಕ ಜಾತ್ರೆ ಮುಕ್ತಾಯ

ಬೆಳಾಲು ಅನಂತೋಡಿ ವಾರ್ಷಿಕ ಜಾತ್ರೆ ಮುಕ್ತಾಯ

ಉಜಿರೆ:ಬೆಳಾಲು ಗ್ರಾಮದ ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆ ಜರಗಿತು.

ಡಿ.25ರಂದು ಗಣಪತಿ ಹೋಮ,ತೋರಣ ಮಹೂರ್ತ,ಹಸಿರು ವಾಣಿ ಸಮರ್ಪಣೆ ಭಜನೆ ಕಾರ್ಯಕ್ರಮ, ಶ್ರೀ ಮಹಾವಿಷ್ಣು ಯಾಗ,ಮಧ್ಯಾಹ್ನ ಮಹಾಪೂಜೆ ,ಅನ್ನ ಸಂತರ್ಪಣೆ, ರಾತ್ರಿ ಶ್ರೀ ದೇವರ ಬಲಿ, ಭೂತ ಬಲಿ ಉತ್ಸವ, ವಸಂತ ಕಟ್ಟೆ ಪೂಜೆ ಹಾಗೂ ಇನ್ನಿತರ ಕಾರ್ಯಕ್ರಮಗಳು ತುಳು ನಾಟಕ ಪ್ರದರ್ಶನ ನಡೆಯಿತು.
ಡಿ.26ರಂದು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ನವಕಲಶ ಪೂಜೆ, ಕಲಶಾಭಿಷೇಕ, ಸಂಪ್ರೋಕ್ಷಣೆ, ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ ಶ್ರೀ ದುರ್ಗಾಪೂಜೆ, ಭಜನೆ ಕಾರ್ಯಕ್ರಮ, ಪರಿವಾರ ದೈವಗಳ ನರ್ತನ ಸೇವೆ ನಡೆಯಿತು.

Leave a Reply

You May Have Missed

error: Content is protected !!