ನೆಲ್ಯಾಡಿ ಪಡುಬೆಟ್ಟು ಯೂತ್ ಫ್ರೆಂಡ್ಸ್ ಕ್ಲಬ್ ಕಚೇರಿ ಉದ್ಘಾಟನೆ, ಸನ್ಮಾನ, ಜರ್ಸಿ ಬಿಡುಗಡೆ

ನೆಲ್ಯಾಡಿ ಪಡುಬೆಟ್ಟು ಯೂತ್ ಫ್ರೆಂಡ್ಸ್ ಕ್ಲಬ್ ಕಚೇರಿ ಉದ್ಘಾಟನೆ, ಸನ್ಮಾನ, ಜರ್ಸಿ ಬಿಡುಗಡೆ

ನೆಲ್ಯಾಡಿ: ಯೂತ್ ಫ್ರೆಂಡ್ಸ್ ಕ್ಲಬ್ ಕಚೇರಿ ಉದ್ಘಾಟನೆ, ಸನ್ಮಾನ, ಜರ್ಸಿ ಬಿಡುಗಡೆ ಕಾರ್ಯಕ್ರಮವು ಪಡುಬೆಟ್ಟುವಿನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೂತ್ ಫ್ರೆಂಡ್ಸ್ ಕ್ಲಬ್ ನ ಚೇತನ್ ಪಡುಬೆಟ್ಟು ಅವರು ವಹಿಸಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಮಾಜ ಸೇವಕ ಮಾಜಿ, ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ, ನೆಲ್ಯಾಡಿ ಸೈಂಟ್ ಜಾರ್ಜ್ ವಿದ್ಯಾಸಂಸ್ಥೆಯ ರಾಜ್ಯಮಟ್ಟದ ತ್ರೋಬಾಲ್ ಆಟಗಾರ ಸಾಬೀತ್ ಪಡುಬೆಟ್ಟು, ಬಿಲಾಲ್ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಹಾಜಿ ಉಮ್ಮರಬ್ಬ, ಉಳಿತ್ತೊಟ್ಟು ಮತ್ತು ಉಪ್ಪಿನಂಗಡಿ ಕರಾಯ ಸ ಹಿ ಪ್ರಾ ಶಾಲೆಯ ಮುಖ್ಯ ಗುರುಗಳಾದ ಮಹಾಲಿಂಗ ಮಾಸ್ತರ್ ಪಡುಬೆಟ್ಟು ಇವರುಗಳನ್ನು ಕ್ಲಬ್ ನ ವತಿಯಿಂದ ಸನ್ಮಾನಿಸಲಾಯಿತು.

ಗಂಗಾಧರ ಶೆಟ್ಟಿ ಹೊಸಮನೆ, ಗ್ರಾಮ ಪಂಚಾಯತ್ ಸದಸ್ಯರಾದ ಸಲಾಂ ಬಿಲಾಲ್, ಶ್ರೀಮತಿ ಜಯಲಕ್ಷ್ಮೀ ಪ್ರಸಾದ್, ಶ್ರೀಮತಿ ಪುಷ್ಪ ಚೆನ್ನಪ್ಪ, ಶಬೀರ್ ಸಾಹೇಬ್, ಪತ್ರಕರ್ತರಾದ ಶವೀರುದ್ದೀನ್, ಅಬ್ಬಾಸ್ ಪಡುಬೆಟ್ಟು, ಕುಂಞಿ ಮೋನು, ಕೆ ಪಿ ಆನಂದ ಪಡುಬೆಟ್ಟು ಇವರುಗಳು ಯೂತ್ ಫ್ರೆಂಡ್ ಕ್ಲಬ್ ಪಡುಬೆಟ್ಟು ಇದರ ಜರ್ಸಿ ಬಿಡುಗಡೆ ಮಾಡಿದರು.

ಕೆ ಪಿ ಆನಂದ ಪಡುಬೆಟ್ಟು ಪ್ರಾಸ್ತಾವಿಕವಾಗಿ ಮಾತನಾಡಿದರು, ತೌಫಿಕ್ ಪಡುಬೆಟ್ಟು ಸ್ವಾಗತಿಸಿ, ಸಿನಾನ್ ನಿರೂಪಿಸಿದರು.

Previous post

ಉಪ ವಲಯಾರಣ್ಯಾಧಿಕಾರಿ ಸಂಜೀವ ಪೂಜಾರಿ ಬಂಧನಕ್ಕೆ ಆಗ್ರಹ : ಕಡಬ ಠಾಣೆ ಎದುರು ವಿ.ಹಿಂ.ಪ, ಬಜರಂಗದಳ ಪ್ರತಿಭಟನೆ, ಭಜನೆ

Next post

ಮುಗೇರಡ್ಕ ಮೊಗ್ರು ಶ್ರೀ ದುರ್ಗಾನುಗ್ರಹ ಭಜನಾ ಮಂದಿರ: ಡಿ.31 ರಿಂದ ಜ.01 ರವರೆಗೆ ನವೀಕೃತ ಮಂದಿರದ ಪ್ರವೇಶೋತ್ಸವ

Leave a Reply

You May Have Missed

error: Content is protected !!