ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸಂಘದ ಜಿಲ್ಲಾ ಘಟಕ ರಚನೆ

ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸಂಘದ ಜಿಲ್ಲಾ ಘಟಕ ರಚನೆ

ಕಡಬ : ಕಲ್ಲಡ್ಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾ ಘಟಕ ರಚನೆ ಮಾಡಲಾಯಿತು.
ಜಿಲ್ಲೆಯ ವಿವಿಧ ತಾಲೂಕು ಘಟನೆಗಳ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸಂಘದ ಪದಾಧಿಕಾರಿಗಳು ಭಾಗವಹಿಸಿದ ಈ ಸಭೆಯನ್ನು ಬಂಟ್ವಾಳ ತಾಲೂಕು ಮುಖ್ಯ ಶಿಕ್ಷಕ ಸಂಘದ ಅಧ್ಯಕ್ಷರಾದ ಮಜಿ ಶಾಲೆಯ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಎಸ್.ಕೆ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿದರು.
ಬಳಿಕ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳನ್ನುಆಯ್ಕೆ ಮಾಡಲಾಯಿತು ಗೌರವಾಧ್ಯಕ್ಷರಾಗಿ ಮಜಿ ಶಾಲೆಯ ನಾರಾಯಣ ಪೂಜಾರಿ ಎಸ್.ಕೆ.
ಅಧ್ಯಕ್ಷರಾಗಿ ನಿಂಗರಾಜು ಕೆ.ಪಿ ಅಲಂಕಾರು ಕಡಬ, ಉಪಾಧ್ಯಕ್ಷರಾಗಿ ಬಾಬು ಟಿ ಹಿರೆಬಂಡಾಡಿ ಮತ್ತು ಮಹಾಲಿಂಗ ಬೆಳ್ತಂಗಡಿ, ಪ್ರಧಾನಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಬನ ಸುಳ್ಯ, ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಪ್ರೇಮ ಕೆ.ಕೆ.ಕಾವಳಮುಡೂರು ಮತ್ತು ಶ್ರೀಮತಿ ಶಾರದಾ ಕಡಬ, ಕೋಶಾಧಿಕಾರಿಯಾಗಿ ಪುಟ್ಟರಂಗನಾಥ ಟಿ ಬಂಟ್ವಾಳ, ಸಂಘಟನಾ ಕಾರ್ಯದರ್ಶಿಗಳಾಗಿ ಶ್ರೀಮತಿ ಸುನಂದಾ ಸುಳ್ಯ ಮತ್ತು ಸುರೇಶ್ ಬೆಳ್ತಂಗಡಿ, ನಿರ್ದೇಶಕರಾಗಿ ಶಂಕರ್ ನಾರ್ಶಮೈದಾನ ಮತ್ತು ಮಹೇಶ್ ಕಡಬ ಆಯ್ಕೆಯಾದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಿಂಗರಾಜ್ ಕೆ.ಪಿ. ಯವರು ಮಾತನಾಡಿ ಎಲ್ಲಾ ಶಿಕ್ಷಕರು ಸಹಕಾರ ನೀಡುವಂತೆ, ಮುಖ್ಯ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸಂಘದೊಂದಿಗೆ ಸಂಪರ್ಕದಲ್ಲಿದ್ದುಕೊಂಡು ಕೆಲಸ ಮಾಡುತ್ತೇನೆಂಬ ಭರವಸೆಯನ್ನು ನೀಡಿದವರು.

ಕಾರ್ಯಕ್ರಮದಲ್ಲಿ ಕಲ್ಲಡ್ಕ ಶಾಲೆಯ ಮುಖ್ಯ ಶಿಕ್ಷಕ ಅಬುಬಕ್ಕರ್ ಅಶ್ರಫ್, ಸುಳ್ಯದ ಅಧ್ಯಕ್ಷರಾದ ದೇವರಾಜ್, ಬೆಳ್ತಂಗಡಿಯ ಅಧ್ಯಕ್ಷರಾದ ಬಾಲಕೃಷ್ಣ, ಪುತ್ತೂರು ಕಾರ್ಯದರ್ಶಿ ತಾರನಾಥ್ ವೀರಮಂಗಲ, ಪಾಂಡವರಕಲ್ಲು ನವೀನಾ ಕುಮಾರಿ, ಮದ್ವದ ಭವಾನಿ, ಆನಂದ ಕೆಮ್ಮಾನುಪಲ್ಕೆ, ಗೋಪಾಲ ಸುರಿಬೈಲು, ಶಿವರಾಮ್ ಭಟ್ ಮಿತ್ತನಡ್ಕ, ಚಂದ್ರಾವತಿ ಮಾಣಿ ಮತ್ತು ಎಲ್ಲಾ ತಾಲೂಕಿನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀಮತಿ ದೇವಕಿ ಮೋಂತಿಮಾರು ಮತ್ತು ದಾಮೋದರ ಸರ್ಕಳ ನಿರೂಪಿಸಿದರು. ಪುಟ್ಟರಂಗನಾಥ ಟಿ ವಂದಿಸಿದರು.

Previous post

ಜ.14. ನೆಲ್ಯಾಡಿ ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ 45ನೇ ವರುಷದ ಮಕರ ಜ್ಯೋತಿ ಉತ್ಸವ, ಭಜನಾ ಮಹೋತ್ಸವ ಸಮಾರೋಪ ಸಮಾರಂಭ

Next post

ಇಂಟರ್ ನ್ಯಾಷನಲ್ ಯೋಗದಲ್ಲಿ ” ದಿ ಬೆಸ್ಟ್ ಅವಾರ್ಡ್ ” ಪ್ರಶಸ್ತಿ ಪಡೆದ ಆರಾಧ್ಯ ಎ ರೈ ಗೆ ಸನ್ಮಾನ

Leave a Reply

You May Have Missed

error: Content is protected !!