ಶಿರಾಡಿ ಬೈಕ್ ಗಳ ಮಧ್ಯೆ ಅಪಘಾತ

ಶಿರಾಡಿ ಬೈಕ್ ಗಳ ಮಧ್ಯೆ ಅಪಘಾತ

ಶಿರಾಡಿ: ಕಡಬ ತಾಲೂಕು ಶಿರಾಡಿ ಗ್ರಾಮದ ಮಿತ್ತನಾಜೆ ಎಂಬಲ್ಲಿ ಬೈಕ್ ಗಳ ಮಧ್ಯೆ ಅಪಘಾತ

ಶಿರಾಡಿ ಗ್ರಾಮದ ಶಿವತಡ್ಕ ಎಂಬಲ್ಲಿ ರಬ್ಬರ್ ಟೈಪಿಂಗ್ ಕೆಲಸ ಮಾಡುತ್ತಿದ್ದ ಶಾಲಿ ಎಂಬವರು ಫೆಬ್ರವರಿ 5 ರಂದು ಕೆ ಎ -21-ಇ ಡಿ-0242 ನಂಬರ್ ನ ಬೈಕಿನಲ್ಲಿ ಸ್ನೇಹಿತನಾದ ಶಿಂಡೋ ಜೊತೆ ಶಿರ್ವತಡ್ಕ ಕಡೆಯಿಂದ ಶಿರಾಡಿ ಪೇಟೆಗೆ ರಾತ್ರಿ 8:00 ಗಂಟೆ ಸುಮಾರಿಗೆ ಮಿತ್ತನಾಜೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಶಿರಾಡಿ ಕಡೆಯಿಂದ ಪದಂಬಳ ಕಡೆಗೆ ಕೇರಳ ರಾಜ್ಯದ ಮನ್ನಾರ್ ಕಾಡ್, ಪಾಲಕಾಡು, ಇರುವೇಲ್ ಕುನ್ನತ್ ಮನೆ ನಿವಾಸಿ ಸಿಜೋ.ಜೆ ತೆರಳುತ್ತಿದ್ದ ಕೆ ಎ- 21- ಎಲ್- 5968 ನಂಬರ್ ನ ಬೈಕಿನಲ್ಲಿ ಸಹಸವಾರ ನೊಂದಿಗೆ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಬೈಕ್ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಸಹಸವಾರ ರಸ್ತೆಗೆ ಬಿದ್ದು ಬಲಗಾಲಿನ ಪಾದಕ್ಕೆ, ಬಲ ಕೋಲು ಕಾಲಿಗೆ ರಕ್ತ ಗಾಯವಾಗಿದ್ದು, ಎಡಕಾಲಿನ ಮೊಣ ಗಂಟಿಗೆ, ಕೈಗೆ, ತರಚಿದ ಗಾಯವಾಗಿದ್ದು. ಸ್ಥಳೀಯರು ಆಂಬುಲೆನ್ಸ್ ನಲ್ಲಿ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಸಾಗಿಸಿದ್ದು.
ಅಪಘಾತಪಡಿಸಿದ ಬೈಕ್ ಸವಾರ ಆಸ್ಪತ್ರೆಯ ವೆಚ್ಚ ನೀಡುತ್ತೇನೆ ಎಂದು ಹೇಳಿ ಇದೀಗ ಆಸ್ಪತ್ರೆಯ ವೆಚ್ಚ ನೀಡದಿರುವುದರಿಂದ ಫೆಬ್ರವರಿ 7ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ತಡವಾಗಿ ದೂರು ನೀಡಿ, ದೂರು ದಾಖಲಿಸಲಾಗಿದೆ.

Leave a Reply

You May Have Missed

error: Content is protected !!