ಮೊಬೈಲ್ ಕೇಳಿದಾಗ ಕೊಡಲಿಲ್ಲ ಎಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೈಸ್ಕೂಲ್‌ ವಿದ್ಯಾರ್ಥಿನಿ

ಮೊಬೈಲ್ ಕೇಳಿದಾಗ ಕೊಡಲಿಲ್ಲ ಎಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೈಸ್ಕೂಲ್‌ ವಿದ್ಯಾರ್ಥಿನಿ

ಮೂಡುಬಿದಿರೆ: ತಾಯಿಯಲ್ಲಿ ಮೊಬೈಲ್‌ ಕೇಳಿದಾಗ ಕೊಡಲಿಲ್ಲ ಎನ್ನುವ ಸಿಟ್ಟಿನಲ್ಲಿ ತಂದೆ-ತಾಯಿ ಹೊರಗೆ ಹೋಗಿದ್ದ ವೇಳೆ ಮಗಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ವಾಲ್ಪಾಡಿ ಗ್ರಾಮದ ನಾಗಂದಡ್ಡದಲ್ಲಿ ನಡೆದಿದೆ.

ಉಮೇಶ್‌ ಪೂಜಾರಿ ಅವರ ಪುತ್ರಿ ಯುತಿ(15) ಆತ್ಮಹತ್ಯೆ ಮಾಡಿಕೊಂಡಾಕೆ. ಆಕೆ ಅಳಿಯೂರು ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ.
ರವಿವಾರ ಬೆಳಗ್ಗೆ ತಂದೆ ಕೂಲಿ ಕೆಲಸಕ್ಕೆಂದು ಹೊರಹೋಗಿದ್ದರು. ಸ್ವಲ್ಪ ಹೊತ್ತಿನ ಬಳಿಕ ತಾಯಿ ಮತ್ತು ಕಿರಿಯ ಮಗಳು ಶಿರ್ತಾಡಿಗೆ ಹೊರಟು ಹಿರಿಯ ಮಗಳು ಯುತಿಯನ್ನು ಕೂಡ ಬರಲು ಹೇಳಿದಾಗ ನನಗೆ ಬರೆಯಲು ಇದೆ. ನಾನು ಬರುವುದಿಲ್ಲ ಎಂದ ಅವಳು ತಾಯಿಯ ಕೈಯಲ್ಲಿದ್ದ ಮೊಬೈಲ್‌ ಕೊಡುವಂತೆ ಕೇಳಿದ್ದಳು. ಮೊಬೆ„ಲ್‌ ಈಗ ಕೊಡುವುದಿಲ್ಲ, ವಾಪಸು ಬಂದ ಮೇಲೆ ಕೊಡುತ್ತೇನೆ ಎಂದು ಹೇಳಿ ತಾಯಿ ಹಾಗೂ ಕಿರಿಯ ಮಗಳು ಹೊರಟು ಹೋದರೆನ್ನಲಾಗಿದೆ. ಮಧ್ಯಾಹ್ನ ಮನೆಗೆ ವಾಪಸಾದಾಗ ಮನೆಯಲ್ಲಿ ಮಗಳು ಇರಲಿಲ್ಲ. ಹುಡುಕಾಡಿದಾಗ ಅಪರಾಹ್ನ ಸುಮಾರು 4 ಗಂಟೆ ಹೊತ್ತಿಗೆ ಮನೆ ಹತ್ತಿರದ ಬಾವಿಯಲ್ಲಿ ಆಕೆಯ ಶವ ಪತ್ತೆಯಾಗಿದೆ.
ಓದಿನಲ್ಲಿ ಪ್ರತಿಭಾನ್ವಿತಳಾಗಿದ್ದ ಯುತಿ ಪಠ್ಯೇತರ ವಿಷಯಗಳಲ್ಲೂ ಮುಂದಿದ್ದಳು.

Leave a Reply

You May Have Missed

error: Content is protected !!