ಬಸ್‌ ಚಾಲಕ, ನಿರ್ವಾಹಕರ ನಿರ್ಲಕ್ಷ್ಯ: ಮಹಿಳೆಗೆ ಗಂಭೀರ ಗಾಯ

ಬಸ್‌ ಚಾಲಕ, ನಿರ್ವಾಹಕರ ನಿರ್ಲಕ್ಷ್ಯ: ಮಹಿಳೆಗೆ ಗಂಭೀರ ಗಾಯ

ಮಣಿಪಾಲ: ಬಸ್‌ ಚಾಲಕ ಹಾಗೂ ನಿರ್ವಾಹಕರ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಚಾಲಕ ಕಾಗನೂರು ಭರ್ಮಪ್ಪ ಬಸ್‌ ಅನ್ನು ಉಡುಪಿ ಕಡೆಯಿಂದ ದೆಂದೂರುಕಟ್ಟೆ ಕಡೆಗೆ ಚಲಾಯಿಸಿಕೊಂಡು ಹೋಗುವಾಗ ರಾಂಪುರ ಜಂಕ್ಷನ್‌ನಲ್ಲಿ ಬಸ್‌ ನಿಲ್ಲಿಸಿದ್ದು, ಮಾಲಿನಿ ಎಂ. ರಾವ್‌ (68) ಅವರು ಮುಂಬಾಗಿಲಿನಿಂದ ಬಸ್‌ ಏರುವ ಸಂದರ್ಭದಲ್ಲಿ ನಿರ್ವಾಹಕ ಹೊರಡುವ ಸೂಚನೆ ನೀಡಿದ. ತತ್‌ಕ್ಷಣ ಬಸ್‌ ಚಲಿಸಿದ ಪರಿಣಾಮ ಮಾಲಿನಿ ಅವರು ಆಯತಪ್ಪಿ ರಸ್ತೆಗೆ ಬಿದ್ದರು. ತಲೆಗೆ ತೀವ್ರ ತೆರನಾದ ಗಾಯವಾಗಿದ್ದು, ಮಾಲಿನಿಯವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!