ನೆಲ್ಯಾಡಿ: ಜ್ಞಾನ ವಿಕಾಸ ಕೇಂದ್ರದಲ್ಲಿ ಜೆಸಿಐ ಘಟಕದ ವತಿಯಿಂದ ಬ್ಯಾಂಕಿಂಗ್ ತರಬೇತಿ

ನೆಲ್ಯಾಡಿ: ಜ್ಞಾನ ವಿಕಾಸ ಕೇಂದ್ರದಲ್ಲಿ ಜೆಸಿಐ ಘಟಕದ ವತಿಯಿಂದ ಬ್ಯಾಂಕಿಂಗ್ ತರಬೇತಿ

ನೆಲ್ಯಾಡಿ ಜ್ಞಾನವಿಕಾಸ ಕೇಂದ್ರದಲ್ಲಿ ಜೆಸಿಐ ನೆಲ್ಯಾಡಿ ಘಟಕದ ವತಿಯಿಂದ ಬ್ಯಾಂಕಿಂಗ್ ತರಬೇತಿ ಕಾರ್ಯಾಗಾರ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಜೆಸಿಐ ನೆಲ್ಯಾಡಿಯ ಅಧ್ಯಕ್ಷರಾದ ದಯಾಕರ ರೈ ರವರು ನಡೆಸಿಕೊಟ್ಟರು.
ವೇದಿಕೆಯಲ್ಲಿ ಜ್ಞಾನವಿಕಾಸ ಕೇಂದ್ರ ನೆಲ್ಯಾಡಿ ಇದರ ಅಧ್ಯಕ್ಷರಾದ ಅಪ್ಸ, ಮುಖ್ಯ ಅತಿಥಿಗಳಾಗಿ ಕಡಬ ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನ, ಆಂತರಿಕ ಲೆಕ್ಕಪರಿಶೋಧಕರಾದ ಶೀಲಾವತಿ, ಸೇವಾ ಪ್ರತಿನಿಧಿ ಹೇಮಾವತಿ, ಕೇಂದ್ರ ಸಂಯೋಜಕಿ ಪೂರ್ಣಿಮಾ, ಜ್ಞಾನವಿಕಾಸ ಸದಸ್ಯೆ ಮೇರಿ ಜಾನ್ ಉಪಸ್ಥಿತರಿದ್ದರು.
ನೆಲ್ಯಾಡಿ ಜ್ಞಾನವಿಕಾಸ ಕೇಂದ್ರದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!