ಮುಳ್ಳು ಹಂದಿ ಶಿಕಾರಿಗೆ ಸುರಂಗಕ್ಕೆ ನುಗ್ಗಿದ ಇಬ್ಬರ ಮೃತ್ಯು

ಮುಳ್ಳು ಹಂದಿ ಶಿಕಾರಿಗೆ ಸುರಂಗಕ್ಕೆ ನುಗ್ಗಿದ ಇಬ್ಬರ ಮೃತ್ಯು

ಕೊಟ್ಟಿಗೆಹಾರ: ಮುಳ್ಳು ಹಂದಿ ಇದ್ದ ಸುರಂಗಕ್ಕೆ ಶಿಕಾರಿ ಮಾಡಲು ನುಗ್ಗಿ ಇಬ್ಬರು ಕೂಲಿಕಾರ್ಮಿಕರು ಮೃತ ಪಟ್ಟ ಘಟನೆ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಮಾಳಿಗನಾಡು ಎಂಬಲ್ಲಿ ಸೋಮವಾರ ನಡೆದಿದೆ.
ಮುಳ್ಳು ಹಂದಿ ಶಿಕಾರಿ ಮಾಡಲು ಹೋಗಿ ದರದ ಒಳಗೆ ಇಬ್ಬರು ನುಗ್ಗಿದ ಪರಿಣಾಮ ಉಸಿರಾಟ ಸಾಧ್ಯವಾಗದೆ ತಮಿಳುನಾಡು ಮೂಲದ ವಿಜಯ್ (28) ಮತ್ತು ಶರತ್ (26) ಕೊನೆಯುಸಿರೆಳೆದಿದ್ದಾರೆ.

ಇಬ್ಬರೂ ಮಾಳಿಗನಾಡು ಸಮೀಪದ ಆನೆಗುಂಡಿ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು. ಕಾಳು ಮೆಣಸು ಕೊಯ್ಲಿಗೆ ಬಂದಿದ್ದ ಇವರು ಮುಳ್ಳು ಹಂದಿ ಶಿಕಾರಿ ಮಾಡಲು ಗುಡ್ಡಕ್ಕೆ ತೆರಳಿದ್ದರು ಎನ್ನಲಾಗಿದೆ. ಸುರಂಗದ ದರಕ್ಕೆ ಹೊಗೆ ಹಾಕಿ ಇಬ್ಬರು ಒಳಗೆ ನುಗ್ಗಿದ ಪರಿಣಾಮ ಹೊಗೆಯಿಂದಾಗಿ ಉಸಿರಾಡಲು ಸಾಧ್ಯವಾಗದೆ ಗುಹೆಯೊಳಗೆ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಸ್ಥಳಕ್ಕೆ ಬಾಳೂರು ಸಬ್ ಇನ್ಸ್ ಪೆಕ್ಟರ್ ಪವನ್ ಕುಮಾರ್, ಪೊಲೀಸರು ಮತ್ತು ಸ್ಥಳೀಯರು ಗುಹೆಯೊಳಗೆ ನುಗ್ಗಿ ಶವಗಳನ್ನು ಹೊರತೆಗೆಯಲಾಗಿದೆ. ಮೂಡಿಗೆರೆ ತಾಲೂಕಿನ ಬಾಳೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!