ವಿದ್ಯುತ್ ಪರಿವರ್ತಕ ಕಿಡಿಯಿಂದ ನೆಡುತೋಪಿಗೆ ಬೆಂಕಿ

ವಿದ್ಯುತ್ ಪರಿವರ್ತಕ ಕಿಡಿಯಿಂದ ನೆಡುತೋಪಿಗೆ ಬೆಂಕಿ

ಉಜಿರೆ: ಇಲ್ಲಿನ ನಿನ್ನಿಕಲ್- ಪಾಲೆಂಜ ಬಳಿ ವಿದ್ಯುತ್ ಪರಿವರ್ತಕ ಕಿಡಿಯಿಂದ ಅರಣ್ಯ ಇಲಾಖೆ ನೆಡುತೋಪಿಗೆ ‌ಸೋಮವಾರ ಬೆಂಕಿ ಬಿದ್ದಿದ್ದು ಅರಣ್ಯ ಇಲಾಖೆ, ಅಗ್ನಿಶಾಮಕ ದಳ, ಶೌರ್ಯ ತಂಡ, ಸ್ಥಳೀಯರು ಸೇರಿ ನಿಯಂತ್ರಣ ಮಾಡಿದ್ದಾರೆ.

ಸುಮಾರು 2-3 ಎಕ್ರೆ ಅಕೇಶಿಯ ನೆಡುತೋಪು ಭಾಗಶಃ ಸುಟ್ಟಿದೆ.

ಬೆಂಕಿ ನಿಯಂತ್ರಣದಲ್ಲಿ ಅರಣ್ಯ ಇಲಾಖೆಯ ಉಪವಲಯ ಅರಣ್ಯ ಅಧಿಕಾರಿ ಹರಿಪ್ರಸಾದ್, ಅರಣ್ಯ ಪಾಲಕ ರವಿ, ವೀಕ್ಷಕ ಸದಾನಂದ, ಪಂಚಾಯಿತಿ ಸದಸ್ಯ ಗುರುಪ್ರಸಾದ್ ಕೋಟ್ಯಾನ್ ಪಾಲೆoಜ, ಶೌರ್ಯ ತಂಡದ ಸುಲೇಮಾನ್, ಸಚಿನ್ ಭಿಡೆ,ಸುವಿತ್, ಸಂದೇಶ್, ಉಜಿರೆ ಪಂಚಾಯತಿ ಸಿಬಂದಿ ಸತೀಶ್, ಸ್ಥಳೀಯರಾದ ರವಿ ಮುಂತಾದವರು ಸೇರಿದ್ದರು.

Leave a Reply

You May Have Missed

error: Content is protected !!