ಎನ್‍ಎಂಸಿಗೆ 3 ರ‍್ಯಾಂಕ್ ಮಂಗಳೂರು ವಿವಿ ಸ್ನಾತಕೋತ್ತರ ಪರೀಕ್ಷೆಯಲ್ಲಿ

ಎನ್‍ಎಂಸಿಗೆ 3 ರ‍್ಯಾಂಕ್ ಮಂಗಳೂರು ವಿವಿ ಸ್ನಾತಕೋತ್ತರ ಪರೀಕ್ಷೆಯಲ್ಲಿ

ಸುಳ್ಯ: ಮಂಗಳೂರು ವಿಶ್ವವಿದ್ಯಾನಿಲಯದ 2021-22ನೇ ಸಾಲಿನ ಸ್ನಾತಕೋತ್ತರ ಪರೀಕ್ಷೆಯಲ್ಲಿ ಸುಳ್ಯದ ನೆಹರೂ ಸ್ಮಾರಕ ಮಹಾವಿದ್ಯಾಲಯಕ್ಕೆ 3 ರ‍್ಯಾಂಕ್ ಗಳು ಲಭಿಸಿವೆ.

2021-22ನೇ ಎಂ.ಎಸ್.ಡಬ್ಲ್ಯೂ ಸ್ನಾತಕೋತ್ತರ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿನಿ ಶ್ರೀನಾ.ಪಿ ಪ್ರಥಮ ರ‍್ಯಾಂಕ್, ಮಾಳವಿಕಾ.ಸಿ ದ್ವಿತೀಯ ರ‍್ಯಾಂಕ್ ಹಾಗೂ ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ವಿಭಾಗದ ಪವಿತ್ರ.ಕೆ ಇವರು ಹತ್ತನೇ ರ‍್ಯಾಂಕ್ ಪಡೆದಿರುತ್ತಾರೆ.

ಶ್ರೀನಾ.ಪಿ ಇವರು ಕೇರಳದ ಕಯ್ಯೂರ್ ನಿವಾಸಿಗಳಾದ ಕುಂಞಕೃಷ್ಣನ್ ಹಾಗೂ ಬಿಂದು.ಕೆ.ಕೆ ಇವರ ಪುತ್ರಿ. ಮಾಳವಿಕ.ಸಿ ಇವರು ಚೆರುವತ್ತೂರು ನಿವಾಸಿ ಪದ್ಮನಾಭನ್.ಸಿ. ಹಾಗೂ ವಿಮಲ.ಸಿ ದಂಪತಿಗಳ ಪುತ್ರಿ ಹಾಗೂ ಪವಿತ್ರ.ಕೆ ಚಂದ್ರಶೇಖರ್ ಗೌಡ ಹಾಗೂ ಗಿರಿಜಾ ದಂಪತಿಗಳ ಪುತ್ರಿ, ಓಂ.ಪ್ರಸಾದ್ ರ ಪತ್ನಿ.

Leave a Reply

You May Have Missed

error: Content is protected !!