ಅಕ್ರಮ ಮರಳುಗಾರಿಕೆ ಆರೋಪ; 6 ಲಾರಿ ವಶ

ಅಕ್ರಮ ಮರಳುಗಾರಿಕೆ ಆರೋಪ; 6 ಲಾರಿ ವಶ

ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ 5 ಕಡೆ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯ ಅಡ್ಡೆಗಳಿಗೆ ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ ಮರಳು ಸಮೇತ 6 ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಕೆಂಜಾರು, ಪಡುಪೆರಾರು ದ್ವಾರ, ಪೊಳಲಿ ದ್ವಾರ, ಅಡ್ಡೂರು ಸಮೀಪದ ನೂಯಿ ತಲಾ ಒಂದೊಂದು ಹಾಗೂ ಬಡಗ ಎಡಪದವಿನಲ್ಲಿ 2 ಲಾರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಬಳಿಕ ಮರಳು ಸಮೇತ ಲಾರಿಗಳನ್ನು ಮುಂದಿನ ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಒಪ್ಪಿಸಿದ್ದಾರೆ.

Previous post

ಇಚ್ಲಂಪಾಡಿ:ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಇದರ ವತಿಯಿಂದ ಯಕ್ಷಗಾನ ಬಯಲಾಟ :ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ

Next post

ಬೆಳ್ತಂಗಡಿ ತಾಲೂಕಿನಲ್ಲಿ ಕಾಮಗಾರಿಗಳಲ್ಲಿ ಹಾಗೂ ಅಕ್ರಮ ಸಕ್ರಮ ಜಮೀನು ಮಂಜೂರಾತಿ ಹೆಸರಿನಲ್ಲಿ ಅವ್ಯವಹಾರ ನಡೆಯುತ್ತಿದೆ: ವಸಂತ ಬಂಗೇರ ಆರೋಪ

Leave a Reply

You May Have Missed

error: Content is protected !!