ರಸ್ತೆ ಅಪಘಾತ; ಗಾಯಾಳು ಬೈಕ್‌ ಸವಾರ ಮೃತ್ಯು

ರಸ್ತೆ ಅಪಘಾತ; ಗಾಯಾಳು ಬೈಕ್‌ ಸವಾರ ಮೃತ್ಯು

ಬಂಟ್ವಾಳ: ದೇರಳಕಟ್ಟೆಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಶುಕ್ರವಾರ ಮೃತಪಟ್ಟಿದ್ದಾರೆ.

ಬುಡೋಳಿ ನಿವಾಸಿ ಮಮ್ಮುಂಞಿ ಎಂಬವರ ಪುತ್ರ ಫಾರೂಕ್ (35) ಮೃತರು.
ಇವರಿಗೆ 10 ವರ್ಷಗಳ ಹಿಂದೆ ವಿವಾಹವಾಗಿದ್ದು, ಮಕ್ಕಳಾಗಿರಲಿಲ್ಲ. 10 ವರ್ಷಗಳ ಬಳಿಕ ಮಾ.12ರಂದು ಅವರ ಪತ್ನಿಗೆ ಹೆರಿಗೆಯಾಗಿತ್ತು. ಫಾರೂಕ್ ಮಗುವನ್ನು ನೋಡಲು ದೇರಳಕಟ್ಟೆಯ ಆಸ್ಪತ್ರೆಗೆ ತೆರಳುವಾಗ ದೇರಳಕಟ್ಟೆ ಆಸ್ಪತ್ರೆಯ ಬಳಿಯೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಶುಕ್ರವಾರ ಮೃತಪಟ್ಟಿದ್ದಾರೆ.

Leave a Reply

You May Have Missed

error: Content is protected !!