ನೆಲ್ಯಾಡಿ: “ಆವನಿ ಆರ್ಕೆಡ್” ನೂತನ ವಾಣಿಜ್ಯ ಸಮುಚ್ಚಯ ಉದ್ಘಾಟನೆ

ನೆಲ್ಯಾಡಿ: “ಆವನಿ ಆರ್ಕೆಡ್” ನೂತನ ವಾಣಿಜ್ಯ ಸಮುಚ್ಚಯ ಉದ್ಘಾಟನೆ

ಫೋಟೋ : ಜೋಸೆಫ್ ಸ್ಟುಡಿಯೋ ನೆಲ್ಯಾಡಿ

ನೇಸರ ಡಿ.31: ನೆಲ್ಯಾಡಿಯಲ್ಲಿ ನೂತನವಾಗಿ ನಿರ್ಮಿಸಿದ ವಾಣಿಜ್ಯ ಸಮುಚ್ಚಯ “ಆವನಿ ಆರ್ಕೆಡ್” ಇದರ ಉದ್ಘಾಟನಾ ಸಮಾರಂಭ ಡಿ.31ರಂದು ಬೆಳಗ್ಗೆ 9.50 ಕ್ಕೆ ನಡೆಯಿತು
ಕಟ್ಟಡ ಮಾಲಕ ಡಾ.ಪ್ರಸಾದ್.ಎನ್, ಸಿದ್ಧಿವಿನಾಯಕ ಹೋಮಿಯೋಪತಿ ಕ್ಲಿನಿಕ್, ನೆಲ್ಯಾಡಿ ಇವರ ತೀರ್ಥರೂಪರಾದ ಗೋಜೀವನ್ ಭಟ್ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಹೊಸಮಠ ಸೇವಾ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷ ಕರುಣಾಕರ ಗೋಗಟೆ,ಸೈಂಟ್ ಜಾರ್ಜ್ ಪದವಿಪೂರ್ವ ಕಾಲೇಜಿನ ನಿವೃತ್ತ ಮುಖ್ಯಗುರುಗಳಾದ ಆರ್. ವೆಂಕಟರಮಣ ಭಟ್, ಕುಟುಂಬದ ಪುರೋಹಿತ ಸುಹಾಸ್ ಮೆಹಂದಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನೆಲ್ಯಾಡಿ ಕೆನರಾ ಬ್ಯಾಂಕ್ ಮೆನೇಜರ್ ಅಮಿತ್, ಸಿಬ್ಬಂದಿ ಸುಮಿತ್, ಉದ್ಯಮಿ ಸತೀಶ್ ಭಟ್ ದುರ್ಗಾಶ್ರೀ ಜಯಕುಮಾರ್ ಶಾರದಾ ಕಾಂಪ್ಲೆಕ್ಸ್ ನೆಲ್ಯಾಡಿ,ಶ್ರೀಗಣೇಶ್ ಕಾಂಪ್ಲೆಕ್ಸ್ ನ ಮಾಲಕ ರಾಮಣ್ಣ ಗೌಡ, ಡಾ.ಸದಾನಂದಕುಂದರ್,ಗುಡ್ಡಪ್ಪಶೆಟ್ಟಿ,ಜೋಸ್.ಮಾತಾಲ್ಯಾಬ್.ನೆಲ್ಯಾಡಿ,ಶ್ರೀಮತಿಅನಘಪ್ರಸಾದ್,ಮೊದಲಾದವರು ಉಪಸ್ಥಿತರಿದ್ದರು.
ಕಾಶಿನಾಥ್ ಗೋಗಟೆ ಸ್ವಾಗತಿಸಿ, ಮಾಲಕ ಡಾ.ಪ್ರಸಾದ್.ಎನ್ ಧನ್ಯವಾದ ಸಮರ್ಪಿಸಿ, ಸುರೇಶ್
ಪಡಿಪಂಡ ನಿರೂಪಿಸಿದರು.

Leave a Reply

You May Have Missed

error: Content is protected !!