ರಸ್ತೆ ಅಪಘಾತದಲ್ಲಿ ಯುವಕ ಮೃತ್ಯು

ರಸ್ತೆ ಅಪಘಾತದಲ್ಲಿ ಯುವಕ ಮೃತ್ಯು

ತುಮಕೂರು: ಜಿಲ್ಲೆಯ ಪಾವಗಡದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅಲ್ಲಿ ಉದ್ಯೋಗದಲ್ಲಿದ್ದ ಸುಳ್ಯದ ಯುವಕ ಮೃತಪಟ್ಟ ಘಟನೆ ರವಿವಾರ ರಾತ್ರಿ ಸಂಭವಿಸಿದೆ.

ಸುಳ್ಯದ ಕೇರ್ಪಳ ನಿವಾಸಿ ಸುಳ್ಯದಲ್ಲಿ ರಿಕ್ಷಾ ಚಾಲಕರಾಗಿರುವ ರಮೇಶ್ ಎಂಬವರ ಪುತ್ರ ಪ್ರಜ್ವಲ್ ಕೇರ್ಪಳ (25) ಮೃತ ಯುವಕ.

ಪ್ರಜ್ವಲ್ ಪಾವಗಡದಲ್ಲಿ ಟೋಲ್ ಮೇಲ್ವಿಚಾರಕರಾಗಿ ಕೆಲಸದಲ್ಲಿದ್ದರು. ರವಿವಾರ ತಡ ರಾತ್ರಿ ಬೈಕ್‍ನಲ್ಲಿ ಹೋಗುತ್ತಿದ್ದಾಗ ಟೋಲ್ ಸಮೀಪವೇ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಮೃತರು ತಂದೆ, ತಾಯಿ, ಓರ್ವ ಸಹೋದರಿಯನ್ನು ಅಗಲಿದ್ದಾರೆ. ಪಾವಗಡ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

You May Have Missed

error: Content is protected !!