ಮಂಗಳೂರು : ವಿದ್ಯಾರ್ಥಿನಿಯರಿಗೆ ಕಾರು ಢಿಕ್ಕಿ

ಮಂಗಳೂರು : ವಿದ್ಯಾರ್ಥಿನಿಯರಿಗೆ ಕಾರು ಢಿಕ್ಕಿ

ಮಂಗಳೂರು: ನಗರ ಹೊರವಲಯದ ಅಡ್ಯಾರ್‌ನ ಸಹ್ಯಾದ್ರಿ ಕಾಲೇಜಿನ ಬಳಿ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಯರಾದ ಜಿಸ್ಸಂ ಒ.ಎಸ್. ಮತ್ತು ಜೋಸ್ನಾ ಚಾಕೋಗೆ ಕಾರು ಢಿಕ್ಕಿಯಾಗಿರುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಅಡ್ಯಾರ್‌ನ ಹಾಸ್ಟೆಲ್‌ನಿಂದ ಬಿಕರ್ನಕಟ್ಟೆಯಲ್ಲಿರುವ ಕಾಲೇಜಿಗೆ ತೆರಳಲು ಇಂದು ಬೆಳಗ್ಗೆ ಮಂಗಳೂರು-ಬಿಸಿ ರೋಡ್ ರಸ್ತೆಯನ್ನು ದಾಟುತ್ತಿದ್ದಾಗ ವೇಗವಾಗಿ ಬಂದ ಕಾರು ಮುಂದೆ ಸಾಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿಯಾಗಿದೆ. ಬಳಿಕ ವಿದ್ಯಾರ್ಥಿನಿಯರಿಗೆ ಢಿಕ್ಕಿ ಹೊಡೆದಿದೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿನಿಯರನ್ನು ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದ್ವಿಚಕ್ರ ವಾಹನ ಸವಾರ ಶಿವಪ್ರಸಾದ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಕಾರು ಚಾಲಕ ಮುಹಮ್ಮದ್ ಆಶ್ರಫ್ ವಿರುದ್ಧ ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!