ಬಡತನದಲ್ಲಿರುವ ಹೊನ್ನಮ್ಮರ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯವನ್ನು ನೀಡಿದ ಬಾಲಕೃಷ್ಣ ‌ನೈಮಿಷ ಸೌತಡ್ಕ

ಬಡತನದಲ್ಲಿರುವ ಹೊನ್ನಮ್ಮರ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯವನ್ನು ನೀಡಿದ ಬಾಲಕೃಷ್ಣ ‌ನೈಮಿಷ ಸೌತಡ್ಕ

ಕೊಕ್ಕಡ: ಮಹಾವೀರ ಕಾಲೋನಿ ನಿವಾಸಿ ತೀರಾ ಬಡತನದಲ್ಲಿರುವ ಹೊನ್ನಮ್ಮ ಇವರ ಮನೆ ನಿರ್ಮಾಣಕ್ಕೆ ಸಮಾಜ ಸೇವಕ, ಕೊಡುಗೈ ದಾನಿ ಸೌತಡ್ಕ ನೈಮಿಷ ಹೌಸ್ ಆಫ್ ಸ್ಪೈಸಸ್ ಮಾಲಕರಾದ ಬಾಲಕೃಷ್ಣ ‌ನೈಮಿಷ ಇವರು 25,000‌ ಹಣ ಹಾಗೂ ಮನೆಗೆ ಅವಶ್ಯಕತೆ ಇರುವ ದಿನಸಿ ಸಾಮಾಗ್ರಿಗಳ ನೆರವನ್ನು ‌ನೀಡಿದರು.

ಈ ಸಂದರ್ಭದಲ್ಲಿ ಹಿರಿಯರಾದ ಕೃಷ್ಣ ಭಟ್ ಹಿತ್ತಿಲು, ಕೊಕ್ಕಡ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ, ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯೋಗೀಶ್ ಆಲಂಬಿಲ, ಉಪಾಧ್ಯಕ್ಷರಾದ ಪವಿತ್ರ ಗುರುಪ್ರಸಾದ್, ಸದಸ್ಯರಾದ ಪ್ರಭಾಕರ್ ಗೌಡ ಮಲ್ಲಿಗೆಮಜಲು ಉಪಸ್ಥಿತಿ ಇದ್ದರು.

Previous post

30 ಲಕ್ಷ ಅನುದಾನದಲ್ಲಿ ಅಭಿವೃದ್ಧಿಗೊಂಡ ತಳೂರು ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿದ ಸಚಿವ ಎಸ್. ಅಂಗಾರ

Next post

ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್(ರಿ) ಹಾಗೂ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ) ಸಂಸ್ಥೆಗೆ ಗೌರಾವರ್ಪಣೆ

Leave a Reply

You May Have Missed

error: Content is protected !!