ಸ್ನೇಕ್ ಅಶೋಕ್ ನಾಗರ ಹಾವು ಹಿಡಿಯುವ ವೇಳೆ ಹಾವು ಕಚ್ಚಿ ಮಂಗಳೂರು ಆಸ್ಪತ್ರೆಗೆ ದಾಖಲು

ಸ್ನೇಕ್ ಅಶೋಕ್ ನಾಗರ ಹಾವು ಹಿಡಿಯುವ ವೇಳೆ ಹಾವು ಕಚ್ಚಿ ಮಂಗಳೂರು ಆಸ್ಪತ್ರೆಗೆ ದಾಖಲು

ಬೆಳ್ತಂಗಡಿ: ಹಾವುಗಳ ಸಂರಕ್ಷಕ,ವಿಷಪೂರಿತ ಹಾವುಗಳನ್ನು ಹಿಡಿದು ಖ್ಯಾತರಾದ ಸ್ನೇಕ ಅಶೋಕ್ ಲಾಯಿಲ ಇವರು ನಾಗರ ಹಾವು ಹಿಡಿಯುವ ವೇಳೆ ಆಕಸ್ಮಿಕವಾಗಿ ಹಾವು ಕಚ್ಚಿದ್ದು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಧರ್ಮಸ್ಥಳ ಗ್ರಾಮದ ಮನೆಯೊಂದರಲ್ಲಿ ನಾಗರ ಹಾವು ಇರುವುದಾಗಿ ಸ್ನೇಕ್ ಅಶೋಕ್ ಅವರಿಗೆ ಮಾಹಿತಿ ಬಂದಿತ್ತು, ರಕ್ಷಣೆಗೆ ತಕ್ಷಣ ಹೊರಟ ಅವರು ನಾಗರ ಹಾವನ್ನು ಹಿಡಿಯುತ್ತಿದ್ದ ವೇಳೆ ಆಕಸ್ಮಿಕವಾಗಿ ಹಾವು ಕಚ್ಚಿದೆ ಎನ್ನಲಾಗುತ್ತಿದೆ.
ತಕ್ಷಣ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.

Previous post

ಸಹಾಯಹಸ್ತ ಲೋಕಸೇವಾ ಚಾರಿಟೇಬಲ್ ಟ್ರಸ್ಟ್(ರಿ) ಹಾಗೂ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ) ಸಂಸ್ಥೆಗೆ ಗೌರಾವರ್ಪಣೆ

Next post

4.02 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೆಟ್ಟಣ-ಚೆಂಡೆಹಿತ್ಲು-ಪುತ್ತಿಲ-ಬೊಟ್ಟಡ್ಕ-ಕೆಂಜಾಳ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಎಸ್.ಅಂಗಾರ

Leave a Reply

You May Have Missed

error: Content is protected !!