ಶಿಬಾಜೆ: ಪಡಂತಾಜೆ ಸುರಕ್ಷಿತಾರಣ್ಯದ ರಸ್ತೆ ಬದಿ ಚಿರತೆ ಮರಿಯ ಶವ ಪತ್ತೆ





ಶಿಬಾಜೆ : ಮಾ.25ರಂದು ಇಲ್ಲಿಯ ಪಡಂತಾಜೆ ಪಂಚಾಯತ್ ರಸ್ತೆಯ 1೦೦ ಮೀ, ಒಳಗಡೆ ಸುಮಾರು ಆರು ತಿಂಗಳ ಪ್ರಾಯದ ಮರಿ ಚಿರತೆ ಕಳೇಬರಹ ಪತ್ತೆಯಾಗಿದೆ.

ಅರಣ್ಯ ಇಲಾಖೆಯ ಸಿಬ್ಬಂದಿಗಳು ಗಸ್ತು ತಿರುಗುವ ಸಂದರ್ಭ ಕಳೇಬರಹ ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ನಿಯಮದ ಪ್ರಕಾರ ಚಿರತೆಯ ಕಳೆಬರಹವನ್ನು ಪೋಸ್ಟ್ ಮಾರ್ಟಂ ಮಾಡಿ ದಫನ ಮಾಡಲಾಯಿತು.

ಕಾಡಿಗೆ ಇತ್ತೀಚಿನ ದಿನಗಳಲ್ಲಿ ವಿಪರೀತವಾಗಿ ಬೆಂಕಿ ಬೀಳುತ್ತಿರುವುದರಿಂದ. ಕಾಡಿನ ಪ್ರಾಣಿಗಳಿಗೆ ಆಹಾರ ನೀರು ಸಿಗದೇ ಈ ಚಿರತೆ ಮರಿ ಈ ರೀತಿ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಗ್ರಾಮ ಪಂಚಾಯತ್ ಅಧ್ಯಕ್ಷ ರತೀಶ್ ಗೌಡ, ಸದಸ್ಯರು, ಅರಣ್ಯ ಇಲಾಖಾಧಿಕಾರಿಗಳು ಹಾಗೂ ಗ್ರಾಮಸ್ಥರು ಸಹಕರಿಸಿದರು.














Leave a Reply