ಧರ್ಮಸ್ಥಳ ಮುಂಡ್ರುಪಾಡಿಯಲ್ಲಿ ಬೈಕಿಗೆ ಲಾರಿ ಡಿಕ್ಕಿ : ಬೆಳ್ತಂಗಡಿ ಖಾಸಗಿ ಸವೆ೯ಯರ್ ಪ್ರಸಾದ್ ಶೆಟ್ಟಿ ಮೃತ್ಯು

ಧರ್ಮಸ್ಥಳ ಮುಂಡ್ರುಪಾಡಿಯಲ್ಲಿ ಬೈಕಿಗೆ ಲಾರಿ ಡಿಕ್ಕಿ : ಬೆಳ್ತಂಗಡಿ ಖಾಸಗಿ ಸವೆ೯ಯರ್ ಪ್ರಸಾದ್ ಶೆಟ್ಟಿ ಮೃತ್ಯು

ಬೆಳ್ತಂಗಡಿ: ಬೈಕಿಗೆ ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ವಾಹನ ಅಪಘಾತದಲ್ಲಿ ಗಂಭೀರಗೊಂಡ ಬೈಕ್ ಸವಾರ ಬೆಳ್ತಂಗಡಿ ಖಾಸಗಿ ಸವೆ೯ಯರ್ ಗುರುವಾಯನಕೆರೆ ಶಕ್ತಿನಗರ ನಿವಾಸಿ ಪ್ರಸಾದ್ ಶೆಟ್ಟಿ(27ವ) ಸಾವನ್ನಪ್ಪಿದ್ದಾರೆ. ಸಹ ಸವಾರ ಸವೆ೯ ಇಲಾಖೆಯ ಸವೆ೯ಯರ್ ವಿಶ್ವನಾಥ್ ರಾವ್ ಗಂಭೀರ ಗಾಯಗೊಂಡು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಧರ್ಮಸ್ಥಳ ಸಮೀಪದ ಮುಂಡ್ರುಪ್ಪಾಡಿ ಎಂಬಲ್ಲಿ ಸವೆ೯ ಕಾಯ೯ ನಡೆಸಿ ಬರುತ್ತಿರುವ ಸಂದರ್ಭದಲ್ಲಿ ಈ ದುಘ೯ಟನೆ ನಡೆದಿದೆ. ಧಮ೯ಸ್ಥಳ ಚಚ್೯ ಸಮೀಪದ ಮುಂಡ್ರುಪಾಡಿಯಲ್ಲಿ ಲಾರಿ ಬೈಕ್ ಗೆ ಡಿಕ್ಕಿ ಹೊಡೆದಿದ್ದು ಈ ವೇಳೆ ಬೈಕ್ ನಲ್ಲಿದ್ದ ಇಬ್ಬರು ರಸ್ತೆಗೆ ಎಸೆಯಲ್ಪಟ್ಟು, ಗಂಭೀರ ಗಾಯವಾಗಿದ್ದು, ಚಿಕಿತ್ಸೆ ಗಾಗಿ ಆಸ್ಪತ್ರೆಗೆ ತರುವ ಈ ವೇಳೆ ಬೈಕ್ ಸವಾರ ಗುರುವಾಯನಕೆರೆ ನಿವಾಸಿ ಪ್ರಸಾದ್ ಶೆಟ್ಟಿ ಸಾವನ್ನಪ್ಪಿದ್ದಾರೆ. ಸಹಸವಾರ ಸರ್ವೆಯರ್ ವಿಶ್ವನಾಥ್ ರಾವ್ ಗಂಭೀರ ಗಾಯಗೊಂಡಿದ್ದು ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

You May Have Missed

error: Content is protected !!