ಕೆನಡಾದ ಟೊರಂಟೋದಲ್ಲಿ ಲ್ಯಾಂಬ್ಡನ್ ಕಾಲೇಜಿನಿಂದ ಕಡಬ ತಾಲ್ಲೂಕು ಇಚ್ಲಂಪಾಡಿಯ ವಿದ್ಯಾರ್ಥಿಗೆ ಪದವಿ ಪ್ರದಾನ

ಕೆನಡಾದ ಟೊರಂಟೋದಲ್ಲಿ ಲ್ಯಾಂಬ್ಡನ್ ಕಾಲೇಜಿನಿಂದ ಕಡಬ ತಾಲ್ಲೂಕು ಇಚ್ಲಂಪಾಡಿಯ ವಿದ್ಯಾರ್ಥಿಗೆ ಪದವಿ ಪ್ರದಾನ

ಇಚ್ಲಂಪಾಡಿ: ಕ್ವಾಲಿಟಿ ಇಂಜಿನಿಯರಿಂಗ್ ಮ್ಯಾನೇಜ್ಮೆಂಟ್ ಎಂಬ ವಿಷಯದಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿ ಸ್ನಾತಕೋತ್ತರ ಪದವಿ ಪೂರೈಸಿದ ಇಚಿಲಂಪಾಡಿಯ ಜೆಸ್ವಿನ್ ಜೋಸೆಫ್‌ರವರಿಗೆ ಮಾ.14ರಂದು ಕೆನಡಾದ ಟೊರಂಟೋದಲ್ಲಿ ನಡೆದ 2021-22ನೇ ಸಾಲಿನ ಪದವಿ ದಿನದಂದು ಪದವಿ ಪ್ರದಾನ ಮಾಡಲಾಯಿತು.

ಲ್ಯಾಂಬ್ಡನ್ ಕಾಲೇಜ್ ಟೊರಂಟೋ ಕ್ಯಾಂಪಸ್ ಇದರ ವತಿಯಿಂದ ಈ ಕಾರ್ಯಕ್ರಮ ನಡೆದಿದ್ದು ಕಾಲೇಜಿನ ಡೈರೆಕ್ಟರ್ ಮೈಕಲ್ ವೊರಾಕ್ಸ್‌ ಅವರು ಸ್ನಾತಕೋತ್ತರ ಪದವಿ ಪ್ರದಾನ ಮಾಡಿದರು.
ಇವರು ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ್ದರು. ಇವರು ಕಡಬ ತಾಲ್ಲೂಕು ಇಚ್ಲಂಪಾಡಿ ನಿವಾಸಿ, ಪುತ್ತೂರು ತಾ.ಪಂ.ಮಾಜಿ ಅಧ್ಯಕ್ಷೆ ಕೆ.ಟಿ.ವಲ್ಸಮ್ಮರವರ ಕಿರಿಯ ಪುತ್ರರಾಗಿದ್ದಾರೆ.

Leave a Reply

You May Have Missed

error: Content is protected !!