ಮೇ 29ಕ್ಕೆ 2023-24ರ ಶೈಕ್ಷಣಿಕ ವರ್ಷ ಆರಂಭ

ಮೇ 29ಕ್ಕೆ 2023-24ರ ಶೈಕ್ಷಣಿಕ ವರ್ಷ ಆರಂಭ

ಬೆಂಗಳೂರು: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 2023-24ರ ಶೈಕ್ಷಣಿಕ ವರ್ಷ ಮೇ 29ರಿಂದ ಪ್ರಾರಂಭಗೊಳ್ಳಲಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಿದೆ.

ರಾಜ್ಯ ಪಠ್ಯಕ್ರಮದ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಏಕರೂಪದ ಶೈಕ್ಷಣಿಕ ಚಟುವಟಿಕೆ ನಡೆಸುವಂತೆ ಸೂಚಿಸಲಾಗಿದೆ.
ಮೊದಲ ಅವಧಿ ಮೇ 29ರಿಂದ ಅಕ್ಟೋಬರ್‌ 7ರ ತನಕ ಇರಲಿದೆ. ಅಕ್ಟೋಬರ್‌ 8ರಿಂದ ಅಕ್ಟೋಬರ್‌ 24ರ ತನಕ ದಸರಾ ರಜೆ ಇರಲಿದೆ. ಎರಡನೇ ಅವಧಿ ಅಕ್ಟೋಬರ್‌ 25ರಿಂದ 2024ರ ಎ.10ರ ವರೆಗೆ ಇರಲಿದೆ. ಎ.11ರಿಂದ ಬೇಸಗೆ ರಜೆ ಪ್ರಾರಂಭಗೊಳ್ಳಲಿದ್ದು ಮೇ 28ರ ವರೆಗೆ ರಜೆ ಇರಲಿದೆ.

Leave a Reply

You May Have Missed

error: Content is protected !!