ಗುಂಡ್ಯ : ಹಿಟ್ ಅಂಡ್ ರನ್; ಒಂದು ಸಾವು

ಗುಂಡ್ಯ : ಹಿಟ್ ಅಂಡ್ ರನ್; ಒಂದು ಸಾವು

ಗುಂಡ್ಯ: ರಾಷ್ಟ್ರೀಯ ಹೆದ್ದಾರಿ ಬೆಂಗಳೂರು-ಮಂಗಳೂರು ಮಧ್ಯೆ ಗುಂಡ್ಯ ಎಂಬಲ್ಲಿ ಇಂದು ಬೆಳಗ್ಗೆ ರಸ್ತೆಯ ಬದಿಯಲ್ಲಿ ಮಲಗಿದ ವ್ಯಕ್ತಿಯ ಮೇಲೆ ಲಾರಿಯೊಂದು ಚಲಾಯಿಸಿ ಪರಾರಿಯಾಗಿದೆ, ಘಟನೆಯಲ್ಲಿ ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಮೃತಪಟ್ಟ ವ್ಯಕ್ತಿಯನ್ನು ಕೇರಳದ ಪೊನ್ನಪ್ಪನ್(ವ.50) ಎಂದು ಗುರುತಿಸಲಾಗಿದೆ.
ಮೃತ ವ್ಯಕ್ತಿಯು ಮೂಲತಃ ಕೇರಳದವನಾಗಿದ್ದು, ಕಳೆದ 15 ವರ್ಷದಿಂದ ಗುಂಡ್ಯ ಪರಿಸರದಲ್ಲಿ ಒಬ್ಬಂಟಿಯಾಗಿ ಜೀವಿಸುತ್ತಾ, ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ರಸ್ತೆಯ ಬದಿಯಲ್ಲಿ ಮಲಗುತ್ತಿದ್ದ.
ನೆಲ್ಯಾಡಿ ಹೂರಠಾಣೆ ಹೆಡ್‍ಕಾನ್‍ಸ್ಟೇಬಲ್ ಕುಶಾಲಪ್ಪ ನಾಯ್ಕ, ಬಾಲಕೃಷ್ಣ, ಪ್ರತಾಪ್ ರೆಡ್ಡಿ, ನವೀನ್ ಸ್ಥಳಕ್ಕೆ ಭೇಟಿ ನೀಡಿ, ಮೃತ ದೇಹವನ್ನು ಉಪ್ಪಿನಂಗಡಿ ಆಸ್ಪತ್ರೆಯ ಶವಗಾರಕ್ಕೆ ಕಳಿಸಲಾಗಿದೆ.

Leave a Reply

You May Have Missed

error: Content is protected !!