ಮೈರೋಳ್ತಡ್ಕ:ಪ್ರಬುದ್ಧ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ

ಮೈರೋಳ್ತಡ್ಕ:ಪ್ರಬುದ್ಧ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ

ಮೈರೋಳ್ತಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಗುರುವಾಯನಕೆರೆ ಇದರ ವತಿಯಿಂದ ಬಂದಾರು ಗ್ರಾಮದ ಮೈರೋಳ್ತಡ್ಕ ಒಕ್ಕೂಟದಲ್ಲಿ ಆರಂಭಗೊಂಡ ಶಾಂಭವಿ ಜ್ಞಾನ ವಿಕಾಸ ಕೇಂದ್ರವು ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆ ಯವರ ಮಾರ್ಗದರ್ಶನ ದಲ್ಲಿ ಕಳೆದ 23ವರ್ಷಗಳಿಂದ ನಡೆದು ಬಂದಿದ್ದು, ಕೇಂದ್ರದ ಸದಸ್ಯರು ಮಹಿಳಾ ಸಬಲೀಕರಣ, ಕೌಟುಂಬಿಕ ಸಾಮರಸ್ಯ, ವೈಯುಕ್ತಿಕ ಸ್ವಚ್ಛತೆ, ಪೌಷ್ಟಿಕ ಆಹಾರ, ಆರ್ಥಿಕ ಸಬಲೀಕರಣ, ಕೌಶಲ್ಯ ಅಭಿವೃದ್ಧಿ ಮುಂತಾದ ಹಲವು ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡು ಉತ್ತಮ ರೀತಿಯ ಅಭಿವೃದ್ಧಿ ಹೊಂದಿರುತ್ತಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ದ ವತಿಯಿಂದ ಈ ಕೇಂದ್ರಗಳಿಗೆ ಪ್ರಬುದ್ಧ ಜ್ಞಾನ ವಿಕಾಸ ಕೇಂದ್ರ ಎಂದು ಗುರುತಿಸಿ ಅಭಿನಂದನಾ ಪ್ರಮಾಣ ಪತ್ರ ವನ್ನು ನೀಡಲಾಯಿತು.
ಸಂಯೋಜಕಿ ಶ್ರೀಮತಿ ಹರಿಣಾಕ್ಷಿ ಸ್ವಾಗತಿಸಿ, ಶ್ರೀಮತಿ ಗಿರಿಜಾ ಧನ್ಯವಾದವಿತ್ತರು. ಸೇವಾಪ್ರತಿನಿಧಿ ಶ್ರೀಮತಿ ಚಂದ್ರಕಲಾ ಕಾರ್ಯಕ್ರಮ ನಿರೂಪಿಸಿದರು.

Leave a Reply

You May Have Missed

error: Content is protected !!