ಬಸ್ಸು ಟ್ಯಾಂಕರ್ ಡಿಕ್ಕಿ: ಪ್ರಯಾಣಿಕನ ಕೈಗೆ ಗಂಭೀರ ಗಾಯ

ಬಸ್ಸು ಟ್ಯಾಂಕರ್ ಡಿಕ್ಕಿ: ಪ್ರಯಾಣಿಕನ ಕೈಗೆ ಗಂಭೀರ ಗಾಯ

ಶಿರಾಡಿ: ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಬಳಿ ಕೆ ಎಸ್ ಆರ್ ಟಿ ಸಿ ರಾಜಹಂಸ ಬಸ್ಸು ಹಾಗೂ ಗ್ಯಾಸ್ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನಲ್ಲಿದ್ದ ಪ್ರಯಾಣಿಕನ ಕೈ ಮುರಿತಕ್ಕೊಳಗಾದ ಘಟನೆ ಏಪ್ರಿಲ್ 13ರ ಸಂಜೆ ಸಂಭವಿಸಿದೆ.

ಗಾಯಾಳುವನ್ನು ತುಮಕೂರಿನ ಮಧು(25)ಎಂದು ಗುರುತಿಸಲಾಗಿದ್ದು, ಆತನಿಗೆ ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿ ಮಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕೊಂಡೊಯ್ಯಲಾಗಿದೆ.

ಉಡುಪಿಯಿಂದ ಧರ್ಮಸ್ಥಳವಾಗಿ ಬೆಂಗಳೂರಿಗೆ ಹೋಗುತ್ತಿದ್ದು ರಾಜಹಂಸ ಬಸ್ಸು, ಶಿವಮೊಗ್ಗದಿಂದ ಮಂಗಳೂರಿಗೆ ಬರುವ ಖಾಲಿ ಗ್ಯಾಸ್ ಟ್ಯಾಂಕರ್ ನಡುವೆ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆಯ ಹೆಡ್ ಕಾನ್ಸ್ಟೇಬಲ್ ಕುಶಾಲಪ್ಪ ಹಾಗೂ ಸಿಬ್ಬಂದಿ ನಾಗರಾಜ್ ಭೇಟಿ ನೀಡಿ ಪರಿಶೀಲಿಸಿದರು.

Previous post

ನೂಜಿಬಾಳ್ತಿಲ ಮಾನಸಿಕ ಅಸ್ವಸ್ಥ ಹಾಗೂ ವೃದ್ಧ ಮಹಿಳೆಯರ ಪಾಲನಾ ಕೇಂದ್ರದ ಕಟ್ಟಡ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿಗಾಹುತಿ

Next post

ಕಡಬ: ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಶ್ರೀಮತಿ ಆಶಾಲತಾ ದಯಾನಂದ ಪೂಜಾರಿ ಅವರಿಗೆ ಅಭಿನಂದನಾ ಕಾರ್ಯಕ್ರಮ

Leave a Reply

You May Have Missed

error: Content is protected !!