ಚಲಿಸುತ್ತಿದ್ದ ಲಾರಿಯಿಂದ ರಸ್ತೆಗೆ ಬಿದ್ದ ಮೂಟೆ – ದ್ವಿಚಕ್ರ ಚಲಾಯಿಸುತ್ತಿದ್ದ ಮಹಿಳೆಗೆ ಗಾಯ

ಚಲಿಸುತ್ತಿದ್ದ ಲಾರಿಯಿಂದ ರಸ್ತೆಗೆ ಬಿದ್ದ ಮೂಟೆ – ದ್ವಿಚಕ್ರ ಚಲಾಯಿಸುತ್ತಿದ್ದ ಮಹಿಳೆಗೆ ಗಾಯ

ಮಂಗಳೂರು: ಇಲ್ಲಿನ ಕದ್ರಿ-ಮಲ್ಲಿಕಟ್ಟೆ ಎಂಬಲ್ಲಿ ರಸ್ತೆಯಲ್ಲಿ ಚಲಿಸುತ್ತಿದ್ದ ಲಾರಿಯಿಂದ ಮೂಟೆ ಗಾಳಿಗೆ ಹಾರಿ ರಸ್ತೆಗೆ ಬಿದ್ದ ಪರಿಣಾಮ ರಸ್ತೆಯಲ್ಲಿ ಲಾರಿಯ ಹಿಂಬದಿಯಿಂದ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬರುತ್ತಿದ್ದ ಮಹಿಳೆಯ ಮುಂಭಾಗ ಕೆಳಗಡೆ ಮೂಟೆ ಬಿದ್ದ ಪರಿಣಾಮ ಸ್ಕೂಟರ್ ಮಗುಚಿ ಬಿದ್ದು ಗಾಯಗೊಂಡ ಘಟನೆ ಏ.19ರಂದು ಮಧ್ಯಾಹ್ನ ನಡೆದಿದೆ.

ಗಾಯಗೊಂಡ ಸ್ಕೂಟರ್ ಸವಾರೆ ಮಂಗಳೂರಿನ ನಿವಾಸಿಯಾದ ರೇಣುಕಾ ಶೆಟ್ಟಿ ಎಂದು ಗುರುತಿಸಲಾಗಿದೆ.
ಅವರ ಪಾದಗಳಿಗೆ ಗಾಯವಾಗಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Leave a Reply

You May Have Missed

error: Content is protected !!