ಮಂಗಳೂರು: ಮಣ್ಣು ಕುಸಿದು ಜೆಸಿಬಿ ಚಾಲಕ ಮೃತ್ಯು

ಮಂಗಳೂರು: ಮಣ್ಣು ಕುಸಿದು ಜೆಸಿಬಿ ಚಾಲಕ ಮೃತ್ಯು

ಮಂಗಳೂರು: ಜೆಸಿಬಿಯಿಂದ ಮಣ್ಣು ಅಗೆತದ ವೇಳೆ ಮಣ್ಣು ಕುಸಿದು ಜೆಸಿಬಿಯ ಮೇಲೆ ಬಿದ್ದು ಜೆಸಿಬಿ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಬುಧವಾರ ಸಂಜೆ ಗಂಜಿಮಠ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಳಲಿ ನಾಡಾಜೆಯಲ್ಲಿ ಸಂಭವಿಸಿದೆ.

ಜೆಸಿಬಿಯ ಚಾಲಕ ಝಾರ್ಖಂಡ್‌ ಕೊಸಾರ್‌ ಅನ್ಸಾರಿ (22) ಮೃತರು.
ಮಣ್ಣು ಅಗೆತದ ವೇಳೆ ನಿಂತಿದ್ದ ಟಿಪ್ಪರ್‌ ಹಿಂಬದಿಗೆ ಹಾಗೂ ಜೆಸಿಬಿಯ ಮೇಲೆ ಮಣ್ಣು ಕುಸಿದು ಬಿದ್ದು ಜೆಸಿಬಿ ಚಾಲನೆ ಮಾಡುತ್ತಿದ್ದ ಚಾಲಕ ಸಿಲುಕಿಕೊಂಡ ಕಾರಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ದಳ, ಬಜಪೆ ಪೊಲೀಸರು ಧಾವಿಸಿ ಬಂದಿದ್ದರು. ಸ್ಥಳೀಯರು ಹಾಗೂ ಎರಡು ಜೆಸಿಬಿ ಸಹಾಯದಿಂದ ಮಣ್ಣು ತೆಗೆಯಲಾಯಿತಾದರೂ, ಅದಾಗಲೇ ಚಾಲಕ ಮೃತಪಟ್ಟಿದ್ದರು ಎನ್ನಲಾಗಿದೆ.

Leave a Reply

You May Have Missed

error: Content is protected !!