ದ್ವಿಚಕ್ರ ವಾಹನ ಹಾಗೂ ಕಾರುಗಳ ಮಧ್ಯೆ ಭೀಕರ ರಸ್ತೆ ಅಪಘಾತ; ಓರ್ವ ಮೃತ್ಯು

ದ್ವಿಚಕ್ರ ವಾಹನ ಹಾಗೂ ಕಾರುಗಳ ಮಧ್ಯೆ ಭೀಕರ ರಸ್ತೆ ಅಪಘಾತ; ಓರ್ವ ಮೃತ್ಯು

ಉಪ್ಪಿನಂಗಡಿ: ಉಪ್ಪಿನಂಗಡಿ ಸಮೀಪ ಕಲ್ಲೇರಿ ಎಂಬಲ್ಲಿ ಭೀಕರ ರಸ್ತೆ ಅಪಘಾತಕ್ಕೆ ವ್ಯಕ್ತಿಯೋರ್ವರು ಬಲಿಯಾದ ಘಟನೆ ಇಂದು(ಎ.22) ಸಂಭವಿಸಿದೆ.

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಕಳಂಜಿಬೈಲ್ ನಿವಾಸಿ ಜಾಫರ್ (35) ಎಂದು ಗುರುತಿಸಲಾಗಿದೆ.

ತನ್ನೆರೆಡು ಮಕ್ಕಳ ಜತೆ ಈದುಲ್ ಫಿತ್ರ್ ಸಂಭ್ರಮದಲ್ಲಿ ನೆಂಟರಸ್ಥರ ಮನೆಗೆ ತೆರಳುತ್ತಿದ್ದ ಜಾಫರ್ ರವರ ಸ್ಕೂಟರ್ ಗೆ ರಾಂಗ್ ಸೈಡ್ ನಲ್ಲಿ ಬಂದ ಕಾರೊಂದು ಢಿಕ್ಕಿ ಹೊಡೆದಿದ್ದು ಅಪಘಾತದ ರಭಸಕ್ಕೆ ಜಾಫರ್ ರವರ ಸ್ಕೂಟರ್ ಪೊದೆಗೆ ಹೋಗಿ ಬಿದ್ದಿದ್ದು, ಜಾಫರ್ ರವರು ಸ್ಥಳದಲ್ಲೇ ಅಸು ನೀಗಿದ್ದಾರೆ. ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು ಸಾರ್ವಜನಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಬ್ಬದ ಸಂಭ್ರಮದಲ್ಲಿ ಈ ಅಪಘಾತ ನಿಜಕ್ಕೂ ಆಘಾತ ಮೂಡಿಸಿದೆ.

Leave a Reply

You May Have Missed

error: Content is protected !!