ನೆಲ್ಯಾಡಿ, ಗೊಳಿತೊಟ್ಟು, ಪೆರಿಯಡ್ಕ ಗಳಲ್ಲಿ ಸಿ.ಆರ್.ಪಿ.ಎಫ್ ಹಾಗೂ ಉಪ್ಪಿನಂಗಡಿ ಪೊಲೀಸರ ಪಥ ಸಂಚಲನ

ನೆಲ್ಯಾಡಿ, ಗೊಳಿತೊಟ್ಟು, ಪೆರಿಯಡ್ಕ ಗಳಲ್ಲಿ ಸಿ.ಆರ್.ಪಿ.ಎಫ್ ಹಾಗೂ ಉಪ್ಪಿನಂಗಡಿ ಪೊಲೀಸರ ಪಥ ಸಂಚಲನ

ನೆಲ್ಯಾಡಿ: ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲು ಸಿ.ಆರ್.ಪಿ.ಎಫ್ ತುಕಡಿಗಳು ಆಗಮಿಸಿದ್ದು, ಇಂದು ಬೆಳಗ್ಗೆ(ಎ.24) ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ನೆಲ್ಯಾಡಿ, ಗೊಳಿತೊಟ್ಟು, ಪೆರಿಯಡ್ಕ ಗಳಲ್ಲಿ ಸಿ.ಆರ್.ಪಿ.ಎಫ್ ಹಾಗೂ ಉಪ್ಪಿನಂಗಡಿ ಪೊಲೀಸರು ಪಥ ಸಂಚಲನ ನಡೆಸಿದರು.

ಉಪ್ಪಿನಂಗಡಿ ಪೊಲೀಸ್‌ ಠಾಣಾಧಿಕಾರಿ ರಾಜೇಶ್, ಧನಂಜಯ ನೇತೃತ್ವದಲ್ಲಿ ಸಿ.ಆರ್.ಪಿ.ಎಫ್ ತುಕಡಿ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಪಥ ಸಂಚಲನ ನಡೆಸಲಾಯಿತು.

ಉಪ್ಪಿನಂಗಡಿ, ನೆಲ್ಯಾಡಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಹಾಗೂ ಸಿ.ಆರ್.ಪಿ.ಎಫ್ ತುಕಡಿಗಳ ನೇತೃತ್ವದಲ್ಲಿ ಪಥ‌ಸಂಚಲನ‌ ಮಾಡಿ ಸಾರ್ವಜನಿಕರಲ್ಲಿ ಶಾಂತಿಯುತ ಚುನಾವಣೆ ನಡೆಯುವ ಕುರಿತು ಆತ್ಮ ವಿಶ್ವಾಸ ಮೂಡಿಸಿದ್ದಾರೆ.

Leave a Reply

You May Have Missed

error: Content is protected !!