ಬೆಳ್ತಂಗಡಿ: ನೇಣು ಬಿಗಿದುಕೊಂಡು ಒಡಿಶಾ ಮೂಲದ ಕಾರ್ಮಿಕ ಆತ್ಮಹತ್ಯೆ

ಬೆಳ್ತಂಗಡಿ: ನೇಣು ಬಿಗಿದುಕೊಂಡು ಒಡಿಶಾ ಮೂಲದ ಕಾರ್ಮಿಕ ಆತ್ಮಹತ್ಯೆ

ಬೆಳ್ತಂಗಡಿ: ಒಡಿಶಾ ಮೂಲದ ಕಾರ್ಮಿಕನೋರ್ವ ಉಜಿರೆ ಗ್ರಾಮದ ಅಜಿತ ನಗರ ಎಂಬಲ್ಲಿರುವ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಎ. 25ರಂದು ನಡೆದಿದೆ.

ಒಡಿಶಾ ರಾಜ್ಯ ಕಂದಾವರಾ ಗೋಬಿಂದ ರಾವುತ್‌ (21) ಮೃತಪಟ್ಟ ಯುವಕ. ಗೋಬಿಂದ ರಾವುತ್‌ ಉಜಿರೆ ಗ್ರಾಮದ ಫೈಬರ್‌ ವಸ್ತುಗಳಿಂದ ನಿರ್ಮಿಸುವ ಗೃಹೋಪಯೊಗಿ ವಸ್ತುಗಳ ನಿರ್ಮಾಣದ ಮಳಿಗೆಯಲ್ಲಿ ಹೆಲ್ಪರ್‌ ಕೆಲಸ ಮಾಡಿಕೊಂಡಿದ್ದ. ಸ್ಥಳೀಯ ಅಜಿತ ನಗರ ಎಂಬಲ್ಲಿರುವ ಬಾಡಿಗೆ ಮನೆಯಲ್ಲಿ ವಾಸವಾಗಿದ್ದವ ಎ. 25ರಂದು ರಾತ್ರಿ ಯಾವುದೋ ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜುಗುಪ್ಸೆಗೊಂಡು ಹಗ್ಗದಿಂದ ಕುತ್ತಿಗೆಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!