ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಕಡಬ ಲೀಜನ್ ನ ಪದಗ್ರಹಣ ಸಮಾರಂಭ

ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಕಡಬ ಲೀಜನ್ ನ ಪದಗ್ರಹಣ ಸಮಾರಂಭ

ಕಡಬ: ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಕಡಬ ಲೀಜನ್ ನ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸಂತ ಜೋಕಿಮ್ಸ್ ಚರ್ಚ್ ಹಾಲ್ ಕಡಬದಲ್ಲಿ ಜರಗಿತು.

ಮುಖ್ಯ ಅತಿಥಿಗಳಾಗಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಇದರ ಪೂರ್ವ ರಾಷ್ಟ್ರೀಯ ಅಧ್ಯಕ್ಷ ಡಾ.ಕೇದಿಗೆ ಅರವಿಂದ ರಾವ್, ರಾಷ್ಟ್ರೀಯ ಉಪಾಧ್ಯಕ್ಷ ಜಿ.ಕೆ ಹರಿಪ್ರಸಾದ್ ರೈ, ನೆಲ್ಯಾಡಿ ಸೀನಿಯರ್ ಚೇಂಬರ್ ನ ಸ್ಥಾಪಕ ಅಧ್ಯಕ್ಷ ಅಬ್ರಹಾಂ ವರ್ಗೀಸ್, ಕಡಬ ಸೀನಿಯರ್ ಚೇಂಬರ್ ನ ಸ್ಥಾಪಕ ಅಧ್ಯಕ್ಷ ಟೈಟಸ್ ವರ್ಗಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯ ಪೂರ್ವಾರ್ಧದಲ್ಲಿ ಅಧ್ಯಕ್ಷತೆ ವಹಿಸಿದ್ದ ದೇವಿಪ್ರಸಾದ್ ಎ ಸ್ವಾಗತಿಸಿದರು.
ಸಭೆಯ ಉತ್ತರಾರ್ಧದಲ್ಲಿ ಅಧ್ಯಕ್ಷತೆ ವಹಿಸಿದ ಪಿ.ವಿಲ್ಸನ್ ಮಾತನಾಡಿ ಎಲ್ಲರ ಸಹಕಾರವನ್ನು ಕೋರಿದರು.
ನೂತನ ಅಧ್ಯಕ್ಷ ಪಿ.ವಿಲ್ಸನ್ ಅವರಿಗೆ ನಿರ್ಗಮನ ಅಧ್ಯಕ್ಷ ದೇವಿಪ್ರಸಾದ್ ಎ ಅವರು ಪ್ರಮಾಣವಚನ ಬೋಧಿಸಿ ಅಧಿಕಾರ ಹಸ್ತಾಂತರ ಮಾಡಿದರು. ನಿರ್ಗಮನ ಕಾರ್ಯದರ್ಶಿ ಜೋಕಿಂ ಡಿ’ಸೋಜಾ ಅವರು ನೂತನ ಕಾರ್ಯದರ್ಶಿ ಚೆರಿಯನ್ ಪಿ.ಕೆ ಹಾಗೂ ನಿರ್ಗಮನ ಕೋಶಾಧಿಕಾರಿ ಶಿವರಾಮ ಶೆಟ್ಟಿ ಕೇಪು ಅವರು ನೂತನ ಕಾರ್ಯದರ್ಶಿ ಯೋಹಾನ್ನನ್.ಎ.ಯು ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಕಾರ್ಯಕ್ರಮದಲ್ಲಿ ನೆಲ್ಯಾಡಿ, ಸುಬ್ರಹ್ಮಣ್ಯ ಘಟಕದ ಅಧ್ಯಕ್ಷರು, ಸದಸ್ಯರುಗಳು ಹಾಗೂ ಕಡಬ ಘಟಕದ ಸೀನಿಯರ್ ಚೇಂಬರ್ ನ ಸದಸ್ಯರುಗಳು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!