ಚುನಾವಣೆ ಹಿನ್ನೆಲೆ: ವಿಶೇಷ ವಾಹನ ತಪಾಸಣೆ

ಚುನಾವಣೆ ಹಿನ್ನೆಲೆ: ವಿಶೇಷ ವಾಹನ ತಪಾಸಣೆ

ಬೆಳ್ತಂಗಡಿ:ಚುನಾವಣೆ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ವಿಶೇಷ ವಾಹನ ತಪಾಸಣೆಯನ್ನು ಎ.29 ರಂದುಶನಿವಾರ ನಡೆಸಲಾಯಿತು.

ಮುಂಡಾಜೆಯ ಭಿಡೆ ಕ್ರಾಸ್ ಬಳಿ ‘ಸರ್ಪ್ರೈಸ್ ಚೆಕಿಂಗ್’ ಎಂಬ ಹೆಸರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ದಿಡುಪೆ-ಪೈಚಾರು ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಲ್ಲಿ ಸಂಚರಿಸುವವರ ಮಾಹಿತಿ ವಿವರ ಸಂಗ್ರಹಿಸುವುದರ ಜತೆ ಪ್ರಯಾಣಿಕರ ಸೊತ್ತುಗಳನ್ನು ತಪಾಸಣೆಯನ್ನು ಅರೆಸೇನಾ ಪಡೆಯ ಸಹಕಾರದಲ್ಲಿ ನಡೆಸಿದರು.

ತಾಲೂಕಿನ ಚಾರ್ಮಾಡಿ,ಕೊಕ್ಕಡ, ಪುಂಜಾಲಕಟ್ಟೆ,ನಾರಾವಿ ಮೊದಲಾದ ಕಡೆಗಳಲ್ಲಿ ಚುನಾವಣಾ ಹಿನ್ನೆಲೆಯಲ್ಲಿ ಈಗಾಗಲೇ ಚೆಕ್ ಪೋಸ್ಟ್ ಗಳು ಕಾರ್ಯನಿರ್ವಹಿಸುತ್ತಿದ್ದು, ವಾರಾಂತ್ಯ ಚುನಾವಣೆ ದಿನಾಂಕ ಸಮೀಪಿಸುತ್ತಿರುವ ಕಾರಣದಿಂದ ಈ ಬಿಗು ಕಾರ್ಯಾಚರಣೆ ನಡೆದಿದೆ.

ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ವಿಪರೀತ ವಾಹನ ದಟ್ಟಣೆ ಇದ್ದು ಪೊಲೀಸರು ಪ್ರತಿ ವಾಹನವನ್ನು ತಪಾಸಣೆ ನಡೆಸಿದ ಬಳಿಕವೇ ಸಂಚರಿಸಲು ಅವಕಾಶ ನೀಡಲಾಯಿತು.

Leave a Reply

You May Have Missed

error: Content is protected !!