ಅರಸಿನಮಕ್ಕಿ ಕಾಡಾನೆ ದಾಳಿ; ಕೃಷಿ ನಾಶ

ಅರಸಿನಮಕ್ಕಿ ಕಾಡಾನೆ ದಾಳಿ; ಕೃಷಿ ನಾಶ

ಅರಸಿನಮಕ್ಕಿ: ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ ಸಮೀಪ ಶುಕ್ರವಾರ ರಾತ್ರಿ ಕಾಡಾನೆ ದಾಳಿ ನಡೆಸಿ ಕೃಷಿ ನಾಶ ಮಾಡಿದೆ.

ಇಲ್ಲಿನ ಕೌಕ್ರಾಡಿ ಗ್ರಾಮದ ಮುಂಡ್ರೇಲು ನಿವಾಸಿ ಶಂಕರ ಜೋಶಿ ಎಂಬುವವರ ಕೃಷಿ ತೋಟಕ್ಕೆ ದಾಳಿ ಮಾಡಿದ ಆನೆ 35 ಅಡಕೆ, 40 ಬಾಳೆ, ಎರಡು ತೆಂಗಿನ ಮರ, ಅನನಾಸು, ಹಲಸಿನ ಕೃಷಿ ಸೇರಿದಂತೆ ಕೃಷಿ ತೋಟಕ್ಕೆ ಅಳವಡಿಸಿದ್ದ ಸ್ಪಿಂಕ್ಲರ್ ಗಳನ್ನು ಜಜ್ಜಿ ಪುಡಿ ಮಾಡಿವೆ.

ತಿಂಗಳ ಹಿಂದೆಯೂ ಇವರ ತೋಟಕ್ಕೆ ದಾಳಿ ನಡೆಸಿದ ಆನೆ ಆ ಸಂದರ್ಭದಲ್ಲಿಯೂ ಕೃಷಿ ನಾಶ ಮಾಡಿತ್ತು. ನಿರಂತರವಾದ ಆನೆದಾಳಿಯಿಂದ ಈ ಪರಿಸರದ ಕೃಷಿಕರಲ್ಲಿ ಆತಂಕ ಮನೆ ಮಾಡಿದೆ.

Leave a Reply

You May Have Missed

error: Content is protected !!