ಮಂಗಳೂರು: ನಿಯಂತ್ರಣ ತಪ್ಪಿ ಬಸ್‌ಸ್ಟ್ಯಾಂಡ್‌ಗೆ ನುಗ್ಗಿದ ಪೊಲೀಸ್ ಜೀಪ್- ಗಾಯ

ನೇಸರ ಜ.3:ಮಂಗಳೂರು ನಗರ ಮಹಿಳಾ ಠಾಣೆಯ ಪೊಲೀಸ್ ಜೀಪು ಬಸ್ಟ್ಯಾಂಡ್ ಗೆ ನುಗ್ಗಿದ ಪರಿಣಾಮ ಓರ್ವ ಪೊಲೀಸ್ ಅಧಿಕಾರಿಗೆ ಗಾಯವಾದ ಘಟನೆ ಇಂದು ನಡೆದಿದೆ.
ಇಂದು ಬೆಳಗ್ಗೆ ಠಾಣೆಯ ಇನ್ಸ್ಪೆಕ್ಟರ್ ರೇವತಿ ಅವರಿದ್ದ ಪೊಲೀಸ್ ಜೀಪ್ ಎಡಪದವು ವಿವೇಕಾನಂದ ಜೂನಿಯರ್ ಕಾಲೇಜ್ ಮುಂಬಾಗದಲ್ಲಿರುವ ಬಸ್ಟ್ಯಾಂಡ್ ಗೆ ನಿಯಂತ್ರಣ ತಪ್ಪಿ ನುಗ್ಗಿದೆ. ಅಪಘಾತದಲ್ಲಿ ಇನ್ಸ್ಪೆಕ್ಟರ್ ರೇವತಿ ಅವರ ಕೈಗೆ ಗಾಯವಾಗಿದೆ.
ಘಟನೆ ನಡೆಯುತ್ತಿದ್ದಂತೆ ಧಾವಿಸಿಬಂದ ಎಡಪದವು ಪಂಚಾಯತ್ ಅಧ್ಯಕ್ಷ ಸುಕುಮಾರ್ ದೇವಾಡಿಗ ಮತ್ತು ಸ್ಥಳೀಯರು ರೇವತಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಪಘಾತದಲ್ಲಿ ಪೊಲೀಸ್ ಜೀಪ್ ಜಖಂಗೊಂಡಿದ್ದು ಬಸ್ಟ್ಯಾಂಡ್ ಹಾನಿಗೊಳಗಾಗಿದೆ.
ಜಾಹೀರಾತು

















Leave a Reply