ಭಂಡಿಹೊಳೆ: ವಿಶಿಷ್ಟ ರೀತಿಯಲ್ಲಿ ಕಾರ್ಮಿಕ ದಿನಾಚರಣೆಯನ್ನು ಆಚರಿಸಿದ ಯುವ ಪಡೆ

ಭಂಡಿಹೊಳೆ: ವಿಶಿಷ್ಟ ರೀತಿಯಲ್ಲಿ ಕಾರ್ಮಿಕ ದಿನಾಚರಣೆಯನ್ನು ಆಚರಿಸಿದ ಯುವ ಪಡೆ

ಭಂಡಿಹೊಳೆ: ಶಿಬಾಜೆ ಗ್ರಾಮದ ಭಂಡಿಹೊಳೆ ಪ್ರದೇಶದಲ್ಲಿ ಸ್ಥಳೀಯ ಯುವಕರ ಸಹಕಾರದಲ್ಲಿ ಇಂದು(ಎ.01) ರಸ್ತೆ ಸ್ವಚ್ಛತಾ ಅಭಿಯಾನ ಕೈಗೊಳ್ಳಲಾಯಿತು.

ಸುಮಾರು 4 ಗಂಟೆಗಳ ಕಾಲ ಕೆಲಸ ನಡೆಸಲಾಯಿತು. ನವೀನ ದಾಮ್ಲೆ, ಕಾರ್ತಿಕ್ ದಾಮ್ಲೆ, ಅವಿನಾಶ್ ಭಿಡೆ, ಪ್ರಾಣೇಶ ಖರೆ, ಪ್ರಭಾಂಜನ್ ಭಿಡೆ, ಶಕ್ತಿ ಪ್ರಸಾದ್ ಅಭ್ಯಂಕರ್ ಮುಂತಾದವರು ಸೇರಿ ಸುಮಾರು 20 ಗೋಣಿಚೀಲದಲ್ಲಿ ಕಸ(ಮುಖ್ಯವಾಗಿ ಬಾಟಲ್ ಹಾಗೂ ಪ್ಲಾಸ್ಟಿಕ್) ಸಂಗ್ರಹಿಸಿ ರಸ್ತೆ ಬದಿಯಲ್ಲಿ ಶೇಖರಿಸಿ ಇಡಲಾಯಿತು. ನಂತರ ವಾಹನದಲ್ಲಿ ಅದನ್ನು ವಿಲೇವಾರಿ ಮಾಡಲು ಪಂಚಾಯತ್ ಗೆ ತಿಳಿಸಲಾಯಿತು.

ಪ್ರಕೃತಿ ಪ್ರಿಯರ ತಂಡದಲ್ಲಿ ಹೆಚ್ಚಿನವರು ವರ್ಕ್ ಫ್ರಮ್ ಹೋಂ ಮಂದಿ ಇವರು ಕಾರ್ಮಿಕರ ದಿನಾಚರಣೆಯನ್ನು ಈ ರೀತಿ ವಿಶೇಷವಾಗಿ ಆಚರಿಸಿದರು.

ನಂತರ ಪರಿಸರ ಜಾಗೃತಿಗಾಗಿ ಬ್ಯಾನರ್ ಳನ್ನು ತಯಾರಿಸಿ ಅದನ್ನು ರಸ್ತೆ ಬದಿಯಲ್ಲಿ ಹಾಕುವ ಕೆಲಸವನ್ನು ಕೂಡ ಮಾಡಲಾಯಿತು. ಸ್ಥಳೀಯರ ಸಹಕಾರದಿಂದ ಉಪಹಾರ ಹಾಗೂ ಪಾನೀಯ ವ್ಯವಸ್ಥೆ ಮಾಡಲಾಯಿತು.

Leave a Reply

You May Have Missed

error: Content is protected !!