ಬೆಳ್ತಂಗಡಿ: ರಿಕ್ಷಾ,ಕಾರು ಮಧ್ಯೆ ಭೀಕರ ಅಪಘಾತ;ಮಗು ಸೇರಿ 5 ಜನರಿಗೆ ಗಂಭೀರ ಗಾಯ

ಬೆಳ್ತಂಗಡಿ: ರಿಕ್ಷಾ,ಕಾರು ಮಧ್ಯೆ ಭೀಕರ ಅಪಘಾತ;ಮಗು ಸೇರಿ 5 ಜನರಿಗೆ ಗಂಭೀರ ಗಾಯ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕಟೀಲು ಕ್ಷೇತ್ರಕ್ಕೆ ತೆರಳುತ್ತಿದ್ದ ಕಾರು ಮತ್ತು ಗೇರುಕಟ್ಟೆಗೆ ತೆರಳುತ್ತಿದ್ದ ರಿಕ್ಷಾ ನಡುವೆ ಡಿಕ್ಕಿಯಾಗಿ ಐವರು ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿಯ ಪೆರಿಂಜೆ ಬಳಿ ಇಂದು(ಮೇ.01) ಸಂಜೆ ನಡೆದಿದೆ.

ತುಮಕೂರು ಮೂಲದ ಕುಟುಂಬವೊಂದು ಧರ್ಮಸ್ಥಳ ಕ್ಷೇತ್ರದ ದರ್ಶನ ಮುಗಿಸಿ ಕಾರಿನಲ್ಲಿ ಕಟೀಲು ಕ್ಷೇತ್ರದ ಕಡೆಗೆ ತೆರಳುತ್ತಿದ್ದರು. ಇದೇ ವೇಳೆ ಗೇರುಕಟ್ಟೆಗೆ ತೆರಳುತ್ತಿದ್ದ ರಿಕ್ಷಾ ಡಿಕ್ಕಿಯಾಗಿದೆ.

ಅಪಘಾತದ ರಭಸಕ್ಕೆ ಮಗು ಸೇರಿ 5 ಜನ ಗಂಭೀರ ಗಾಯಗೊಂಡರು ಎಂದು ತಿಳಿದು ಬಂದಿದೆ.
ಕಾರಿನ ಏರ್ ಬ್ಯಾಗ್ ಓಪನ್ ಆಗಿದ್ದುದರಿಂದ ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

You May Have Missed

error: Content is protected !!