ಭಾರತ ನೌಕಾಪಡೆಯಲ್ಲಿ ಡಿಪ್ಲೊಮ, ಪದವಿ ಪಾಸಾದವರಿಗೆ ಹುದ್ದೆಗಳ ಭರ್ಜರಿ ಆಫರ್

ಭಾರತ ನೌಕಾಪಡೆಯಲ್ಲಿ ಡಿಪ್ಲೊಮ, ಪದವಿ ಪಾಸಾದವರಿಗೆ ಹುದ್ದೆಗಳ ಭರ್ಜರಿ ಆಫರ್

ಭಾರತ ನೌಕಾಪಡೆಯಲ್ಲಿ ಅಗತ್ಯ ಇರುವ ಚಾರ್ಜ್‌ಮನ್‌ ಹುದ್ದೆಗಳನ್ನು ಭರ್ತಿ ಮಾಡಲು ಇದೀಗ ನೋಟಿಫಿಕೇಶನ್‌ ಪ್ರಕಟಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಹಾಕಲು ಮೇ 29 ರವರೆಗೆ ಅವಕಾಶ ಇರುತ್ತದೆ. ಡಿಗ್ರಿ, ಡಿಪ್ಲೊಮ ಪಾಸಾದವರು ಅರ್ಜಿ ಹಾಕಲು ಅರ್ಹರು. ಕನಿಷ್ಠ 18 ವರ್ಷ ಆಗಿರುವ ಗರಿಷ್ಠ 25 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ನೌಕಾಪಡೆ ಚಾರ್ಜ್‌ಮನ್ II ಹುದ್ದೆಗಳ ವಿವರ (ವಿಭಾಗವಾರು)
ಇಲೆಕ್ಟ್ರಿಕಲ್ ಗ್ರೂಪ್ : 42
ವೆಪನ್ ಗ್ರೂಪ್ : 59
ಇಂಜಿನಿಯರಿಂಗ್ ಗ್ರೂಪ್ : 141
ಕಂಸ್ಟ್ರಕ್ಷನ್ ಮತ್ತು ಮೇಂಟೆನೆನ್ಸ್‌ ಗ್ರೂಪ್ : 118
ಪ್ರೊಡಕ್ಷನ್ ಪ್ಲಾನಿಂಗ್ ಮತ್ತು ಕಂಟ್ರೋಲ್ ಗ್ರೂಪ್ : 12
ವಿದ್ಯಾರ್ಹತೆ : ಡಿಪ್ಲೊಮ ಅಥವಾ ವಿಜ್ಞಾನ / ಗಣಿತ/ ಭೌತಶಾಸ್ತ್ರ / ಕೆಮಿಸ್ಟ್ರಿ ವಿಷಯಗಳಲ್ಲಿ ಡಿಗ್ರಿ ಪಾಸ್ ಮಾಡಿರಬೇಕು.

ವಯಸ್ಸಿನ ಅರ್ಹತೆಗಳು
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 25 ವರ್ಷ ವಯಸ್ಸು ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 15-05-2023 ರ ಬೆಳಿಗ್ಗೆ 10-00 ಗಂಟೆಯಿಂದ. ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 29-05-2023 ರ ರಾತ್ರಿ 11-00 ಗಂಟೆವರೆಗೆ.

ಅಪ್ಲಿಕೇಶನ್‌ ಶುಲ್ಕ ವಿವರ
ಸಾಮಾನ್ಯ ಕೆಟಗರಿ, ಒಬಿಸಿ ಕೆಟಗರಿ ಅಭ್ಯರ್ಥಿಗಳು ರೂ.278 ಪಾವತಿಸಬೇಕು. ಎಸ್‌ಸಿ / ಎಸ್‌ಟಿ / ಅಂಗವಿಕಲ / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕವೇ ಪಾವತಿ ಮಾಡಬಹುದು.

Apply Online
ವೆಬ್‌ಸೈಟ್‌ ವಿಳಾಸ https://www.joinindiannavy.gov.in/
ಮೇಲಿನ ಲಿಂಕ್‌ ಕ್ಲಿಕ್ ಮಾಡಿ. ನಂತರ ಓಪನ್ ಆಗುವ ಪೇಜ್‌ನಲ್ಲಿ Join Navy >> Ways to Join >> Civilian >> Chargeman-II, ಆಯ್ಕೆಗಳನ್ನು ಸೆಲೆಕ್ಷನ್‌ ಮಾಡುವ ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಸಬೇಕು.

Leave a Reply

You May Have Missed

error: Content is protected !!