ಅರಸಿನಮಕ್ಕಿ: ನೇಣು ಬಿಗಿದು ಆತ್ಮಹತ್ಯೆ ಕೃಷಿಕ ಮುರಳೀಧರ ಗೌಡ

ಅರಸಿನಮಕ್ಕಿ: ನೇಣು ಬಿಗಿದು ಆತ್ಮಹತ್ಯೆ ಕೃಷಿಕ ಮುರಳೀಧರ ಗೌಡ

ಅರಸಿನಮಕ್ಕಿ : ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯ ಪಾಲೆಂಜ ನಿವಾಸಿ ಕೃಷಿಕ ಮುರಳೀಧರ ಗೌಡ ಪಾಲೆಂಜ ಇವರು ಮೇ.4ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸುತ್ತಿದ್ದ ಇವರು, ಸಾರ್ವಜನಿಕ ಸಂಘ -ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಯೋಜನಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು ಅಲ್ಲದೆ ಇತ್ತೀಚಿಗೆ ನಡೆದ ಅರಸಿನಮಕ್ಕಿ ಸಮೀಪದ ಆರಿಕೆಗುಡ್ಡೆ ಶ್ರೀ ವನದುರ್ಗ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಮೃತರು ತೀವ್ರವಾದ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ ಬರೆದಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

You May Have Missed

error: Content is protected !!