ನೆಲ್ಯಾಡಿ: ಕೃಷಿ ತೋಟಕ್ಕೆ ಕಾಡಾನೆಗಳ ದಾಳಿ; ಅಡಿಕೆ,ಬಾಳೆ ಕೃಷಿ ಧ್ವಂಸ

ನೆಲ್ಯಾಡಿ: ಕೃಷಿ ತೋಟಕ್ಕೆ ಕಾಡಾನೆಗಳ ದಾಳಿ; ಅಡಿಕೆ,ಬಾಳೆ ಕೃಷಿ ಧ್ವಂಸ

ನೆಲ್ಯಾಡಿ: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ನೆಲ್ಯಾಡಿ ಸಮೀಪದ ಕುಂಡಡ್ಕ ಎಂಬಲ್ಲಿ ಮೇ 4ರ ರಾತ್ರಿ ಕಾಡಾನೆಗಳ ಹಿಂಡು ಕೃಷಿ ತೋಟಗಳಿಗೆ ದಾಳಿ ನಡೆಸಿದ್ದು, ಅಪಾರ ಪ್ರಮಾಣದಲ್ಲಿ ಕೃಷಿ ನಾಶ ಉಂಟಾಗಿದೆ.

ಕುಂಡಡ್ಕ ಲಕ್ಷ್ಮೀನಾರಾಯಣ ಶೆಟ್ಟಿ, ಚಂದ್ರಹಾಸ ಶೆಟ್ಟಿ ಎಂಬವರ ಅಡಿಕೆ ತೋಟಕ್ಕೆ ದಾಳಿ ಮಾಡಿದ ಕಾಡಾನೆಗಳು ಅಡಿಕೆ ಕೃಷಿ ಹಾಗೂ ಬಾಳೆ ಕೃಷಿಯನ್ನು ಧ್ವಂಸ ಮಾಡಿದ್ದು, ಇದರಿಂದಾಗಿ ಕೃಷಿಕರಿಗೆ ಅಪಾರ ನಷ್ಟ ಉಂಟಾಗಿದೆ. ಪದೇ ಪದೇ ಈ ರೀತಿಯ ದಾಳಿಯಿಂದ ಕೃಷಿಕರಿಗೆ ತೊಂದರೆ ಉಂಟಾಗಿದೆ. ಸಂಬಂಧಪಟ್ಟ ಇಲಾಖೆಯವರು ಪರಿಶೀಲಿಸಿ, ಕೃಷಿ ನಷ್ಟದ ಬಗ್ಗೆ ಸರ್ಕಾರದಿಂದ ಸಿಗುವ ಪರಿಹಾರ ದೊರಕಿಸಿಕೊಡುವಲ್ಲಿ ಕೈಗೊಳ್ಳಬೇಕಾಗಿದೆ.

Previous post

ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಹಾಗು ಮುಖಂಡರಿಂದ ಕಡಬದಲ್ಲಿ ಚುನಾವಣಾ ಪ್ರಚಾರ

Next post

ಸುಳ್ಯದಲ್ಲಿ ಸುಮನರವರ ವಿಜಯದ ಮೂಲಕ ಕ್ಷೇತ್ರದ ಮತದಾರರು ಅಭಿವೃದ್ಧಿಯ ರಾಜಕೀಯಕ್ಕೆ ಮುನ್ನುಡಿ ಬರೆಯಲಿದ್ದಾರೆ: ಆಪ್ ಜಿಲ್ಲಾಧ್ಯಕ್ಷ ಅಶೋಕ್ ಅಡಮಲೆ

Leave a Reply

You May Have Missed

error: Content is protected !!