ಕಡಬ: ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ 15 ರಿಂದ 18 ವಯೋಮಾನದವರ ಕೋವಿಡ್-19 ಲಸಿಕಾ ಕಾರ್ಯಕ್ರಮ

ಕಡಬ: ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ 15 ರಿಂದ 18 ವಯೋಮಾನದವರ ಕೋವಿಡ್-19 ಲಸಿಕಾ ಕಾರ್ಯಕ್ರಮ

ನೇಸರ ಜ.3: ಕಡಬ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ದಿನಾಂಕ 3/1/2022 ರಂದು 15 ರಿಂದ 18 ವಯೋಮಾನದವರ ಕೋವಿಡ್-19 ಲಸಿಕಾ ಕಾರ್ಯಕ್ರಮವು ಕಡಬ ಪಟ್ಟಣ ಪಂಚಾಯತ್ ಮತ್ತು ಸಮುದಾಯ ಆರೋಗ್ಯ ಕೇಂದ್ರ ಕಡಬ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಜನಾರ್ದನ.ಕೆ.ಎನ್ ಲಸಿಕಾ ಅಭಿಯಾನದ ಪ್ರಯೋಜನ ಎಲ್ಲಾ ವಿದ್ಯಾರ್ಥಿಗಳು ಫಡೆದುಕೊಳ್ಳುವಂತೆ ಕರೆ ನೀಡಿದರು.
ಕಡಬ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಶ್ರೀಮತಿ ಸುಚಿತ್ರಾ ರಾವ್ ಲಸಿಕಾ ಅಭಿಯಾನದ ಕುರಿತು ಮಾಹಿತಿ ನೀಡಿದರು.ಕಡಬ ಉಪತಹಸಿಲ್ದಾರ್ ಮನೋಹರ್ ಕಾರ್ಯಕ್ರಮಕ್ಕೆ ಶುಭ ಕೋರಿದರು.ಕಡಬ ಪಟ್ಟಣ ಪಂಚಾಯಿತಿಯ ಆಡಳಿತಾಧಿಕಾರಿ ಪಕೀರಪ್ಪ ಮೂಲ್ಯ,ಕೋವಿಡ್ ನೋಡಲ್ ಅಧಿಕಾರಿ,ಸಮುದಾಯ ಆರೋಗ್ಯ ಅಧಿಕಾರಿಗಳು,ದಾದಿಯರು,ಆಶಾ ಕಾರ್ಯಕರ್ತೆಯರು ಹಾಗೂ ಉಪನ್ಯಾಸಕರ ಸಹಕಾರದಿಂದ ಲಸಿಕಾ ಅಭಿಯಾನವನ್ನು ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಉಪನ್ಯಾಸಕರಾದ ಸಲೀನ್.ಕೆ.ಪಿ.ಸ್ವಾಗತಿಸಿದರು,ಮಹದೇವ ಶೆಟ್ಟಿ ವಂದಿಸಿದರು,ವಾಸುದೇವ ಗೌಡ ಕಾರ್ಯಕ್ರಮ ನಿರೂಪಿಸಿದರು.

Previous post

ಸುಬ್ರಹ್ಮಣ್ಯ:ಭೂಗತ ಕೇಬಲ್ ಮತ್ತು 8 ಮೆಗಾ ವೋಲ್ಟಾ ಪರಿವರ್ತಕ 11 ಕೆ ವಿ ಫೀಡರ್ ಉದ್ಘಾಟನೆ

Next post

ನೆಲ್ಯಾಡಿ-ಕೊಣಾಲು:ಸೈಂಟ್ ತೋಮಸ್ ಯಾಕೋಬಾಯ ದೇವಾಲಯದಲ್ಲಿ ಮೊರ್ ತೋಮಸ್ ಒರ್ಮ ಪೆರುನ್ನಾಳ್ ಹಬ್ಬ ಮತ್ತು ನೂತನ ಸಭಾಭವನ ಲೋಕಾರ್ಪಣೆ

Leave a Reply

You May Have Missed

error: Content is protected !!