ವಿಟ್ಲದ ಗ್ಯಾಸ್ ಏಜನ್ಸಿ ಸಿಬ್ಬಂದಿ ಮೇಲೆ ತಂಡದಿಂದ ಹಲ್ಲೆ ; ವ್ಯಕ್ತಿ ಆಸ್ಪತ್ರೆಗೆ ದಾಖಲು

ವಿಟ್ಲದ ಗ್ಯಾಸ್ ಏಜನ್ಸಿ ಸಿಬ್ಬಂದಿ ಮೇಲೆ ತಂಡದಿಂದ ಹಲ್ಲೆ ; ವ್ಯಕ್ತಿ ಆಸ್ಪತ್ರೆಗೆ ದಾಖಲು

ವಿಟ್ಲ : ವಿಟ್ಲದ ಗ್ಯಾಸ್ ಏಜೆನ್ಸಿಯ ಸಿಬ್ಬಂದಿ ಮೇಲೆ ಮೇಗಿನಪೇಟೆಯ ಕೋಳಿ ಅಂಗಡಿಯ ಮಾಲಕ ತಂಡದೊಂದಿಗೆ ಬಂದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಿಟ್ಲದ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಸಾಯಿ ಇಂಡಿಯನ್ ಗ್ಯಾಸ್ ಏಜೆನ್ಸಿಯ ಸಿಬ್ಬಂದಿ ಸದಾನಂದ ಆಸ್ಪತ್ರೆಗೆ ದಾಖಲಾದವರಾಗಿದ್ದರೆ. ವಿಟ್ಲದ ಮೇಗಿನಪೇಟೆಯಲ್ಲಿ ಸದಾನಂದರವರು ಕಮರ್ಷಿಯಲ್ ಗ್ಯಾಸ್ ಅನ್ನು ಅಂಗಡಿಗಳಿಗೆ ಕೊಂಡೊಯ್ಯುತ್ತಿದ್ದ ವೇಳೆ ಮೇಗಿನಪೇಟೆಯ ಕೋಳಿ ಅಂಗಡಿಯ ಮಾಲಕನೋರ್ವ ಗ್ಯಾಸ್ ಸಪ್ಲೈ ವಿಚಾರಕ್ಕೆ ಸಂಬಂಧಿಸಿ ಸದಾನಂದರೊಂದಿಗೆ ಮಾತಿಗಿಳಿದು ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ನಿಂದಿಸಿ ತಂಡದೊಂದಿಗೆ ಹಲ್ಲೆ ನಡೆಸಿದ್ದಾರೆ ಎಂದು ಆಸ್ಪತ್ರೆಯಲ್ಲಿ ದಾಖಲಾಗಿರುವ ಸದಾನಂದರವರು ಆರೋಪಿಸಿದ್ದಾರೆ.

Leave a Reply

You May Have Missed

error: Content is protected !!