ಉಜಿರೆ ಶ್ರೀ ಧ.ಮಂ. ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ. ಉದಯಚಂದ್ರ ಅಧಿಕಾರ ಸ್ವೀಕಾರ.

ಉಜಿರೆ ಶ್ರೀ ಧ.ಮಂ. ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ. ಉದಯಚಂದ್ರ ಅಧಿಕಾರ ಸ್ವೀಕಾರ.

ನೇಸರ ಜ.6: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾಗಿದ್ದ ಡಾ. ಸತೀಶ್ಚಂದ್ರರವರು ಸೇವಾ ನಿವೃತ್ತಿ ಹೊಂದಿದ್ದು,ಇವರ ತೆರವಾದ ಸ್ಥಾನಕ್ಕೆ ನೂತನ ಪ್ರಾಂಶುಪಾಲರಾಗಿ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಉದಯಚಂದ್ರರವರು ನೇಮಕಗೊಂಡಿದ್ದಾರೆ.
ನಿವೃತ್ತಿಹೊಂದಿದ ಪ್ರಾಂಶುಪಾಲರಿಗೆ ಕಾಲೇಜಿನ ಸಂಸ್ಥಾಪಕ ಪ್ರಾಂಶುಪಾಲ ಹಾಗೂ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಪ್ರೊ.ಪ್ರಭಾಕರ್ ರವರು ಶುಭಕೋರಿದರು,ನೂತನವಾಗಿ ನೇಮಕಗೊಂಡ ಪ್ರಾಂಶುಪಾಲ ಡಾ.ಉದಯಚಂದ್ರರಿಗೆ ಅಧಿಕಾರ ಹಸ್ತಾಂತರಿಸಿದರು.
ಡಾ.ಉದಯಚಂದ್ರರವರು ತಮ್ಮ 36 ವರ್ಷಗಳ ಸೇವೆಯಲ್ಲಿ ಐದಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪಿ.ಹೆಚ್ ಡಿ ಮಾರ್ಗದರ್ಶಕರಾಗಿದ್ದು, ಎಂಟು ಸಂಶೋಧನಾ ಲೇಖನಗಳನ್ನು ರಾಷ್ಟಿಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಿಸಿದ್ದಾರೆ.ಪದವಿ ಮಕ್ಕಳಿಗಾಗಿ ವಾಣಿಜ್ಯ ಶಾಸ್ತ್ರದಲ್ಲಿ ಹನ್ನೆರಡು ಪಠ್ಯ ಪುಸ್ತಕಗಳನ್ನು ಬರೆದಿರುವ ಇವರಿಗೆ ಐ.ಸಿ.ಎಸ್.ಎಸ್.ಆರ್.ಸಂಸ್ಥೆಯ ಮೇಜರ್ ರಿಸರ್ಚ್ ಪ್ರಾಜೆಕ್ಟ್ ಲಭಿಸಿ, ಕಾರ್ಯ ಪ್ರವೃತ್ತರಾಗಿದ್ದಾರೆ.

Previous post

ನೆಲ್ಯಾಡಿ ರಾಮನಗರ ನಾವಲ್ಲಿ ಶ್ರೀನಾಗದೇವರು, ಅಮೆತ್ತಿಮಾರುಗುತ್ತು ಶ್ರೀರಕ್ತೇಶ್ವರಿ, ಪರಿವಾರ ದೈವಗಳ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮ

Next post

ದಕ್ಷಿಣ ಕನ್ನಡ:ವೀಕೆಂಡ್‌ ಕರ್ಫ್ಯೂ ಈ ವಾರ ಪೂರ್ವ ನಿಗದಿತ ಕಾರ್ಯಕ್ರಮಗಳಿಗೆ ಅವಕಾಶ.

Leave a Reply

You May Have Missed

error: Content is protected !!