ಕಾರು ಢಿಕ್ಕಿ – ಪಾದಾಚಾರಿ ಮಹಿಳೆ ಮೃತ್ಯು

ಕಾರು ಢಿಕ್ಕಿ – ಪಾದಾಚಾರಿ ಮಹಿಳೆ ಮೃತ್ಯು

ಬಂಟ್ವಾಳ: ಬಂಟ್ವಾಳ ತಾಲೂಕಿನ ವಗ್ಗ ಎಂಬಲ್ಲಿ ಪಾದಾಚಾರಿ ಮಹಿಳೆಯೋರ್ವಳಿಗೆ ಕಾರು ಡಿಕ್ಕಿಯಾದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಆಕೆ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಸಾವನ್ನಪ್ಪಿದ ಘಟನೆ ನಡೆದಿದೆ.
ಕಾಡಬೆಡ್ಡು ನಿವಾಸಿ ಸೇಸಮ್ಮ ಮೃತಪಟ್ಟ ಮಹಿಳೆ.

‌ಸೇಸಮ್ಮ ಅವರು ಮನೆಯಿಂದ ವಗ್ಗ ಪೇಟೆಗೆ ನಡೆದುಕೊಂಡು ಬರುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕಾರು ಡಿಕ್ಕಿಯಾಗಿದೆ.
ಇನ್ನು ಬಡಕುಟುಂಬದ ಮಹಿಳೆಯಾಗಿರುವ ಈಕೆ ಸ್ವಸಹಾಯ ಸಂಘದ ಹಣವನ್ನು ಪಾವತಿ ಮಾಡಲು ಬರುತ್ತಿದ್ದ ವೇಳೆ ಮಂಗಳೂರಿನ ಕಡೆ ಪ್ರಯಾಣ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಿದ್ದ ಮಹಿಳಾ ವೈದ್ಯೆಯ ಅಜಾಗರೂಕತೆಯ ಚಾಲನೆಯಿಂದ ಹಿಂದಿನಿಂದ ಪಾದಾಚಾರಿಗೆ ಡಿಕ್ಕಿಯಾಗಿದ್ದು, ಗಂಭೀರವಾದ ಗಾಯಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿಲು ಕೊಂಡುಹೋಗಲಾಯಿತಾದರೂ ದಾರಿ‌ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ‌ವೈದ್ಯರು ತಿಳಿಸಿದ್ದಾರೆ.

ಇತ್ತೀಚೆಗೆ ಈಕೆಯ ಪತಿಗೆ ವಗ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಇದೇ ರೀತಿ ರಿಕ್ಷಾವೊಂದು‌ ಡಿಕ್ಕಿಯಾಗಿದ್ದು, ಬಳಿಕ ಕಾಲಿಗೆ ಗಂಭೀರವಾದ ಗಾಯವಾಗಿ ನಡೆಯಲಾರದೆ ಮನೆಯಲ್ಲಿದ್ದು, ಸ್ವಲ್ಪ ಸಮಯದ ಬಳಿಕ ನಿಧನರಾಗಿದ್ದಾರೆ.

ಸ್ಥಳಕ್ಕೆ ಟ್ರಾಫಿಕ್ ಎಸ್,ಐ ಮೂರ್ತಿ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

You May Have Missed

error: Content is protected !!